ಮುಲ್ಕಿ: ಮುಲ್ಕಿ ಶಾಲೆಬೆಟ್ಟು ಶ್ರೀ ಸತ್ಯದುರ್ಗಾ ದೇವಿ ಸನ್ನಿಧಿಯಲ್ಲಿ 22ನೇ ವರ್ಷಾವಧಿ ಉತ್ಸವ ಶಿಬರೂರು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜರುಗಿತು.
ಶನಿವಾರ ಬೆಳಗ್ಗೆ ಪ್ರಾರ್ಥನೆ ಬಳಿಕ ಚಂಡಿಕಾ ಹೋಮ ಆರಂಭವಾಯಿತು. ಮಧ್ಯಾಹ್ನ ಪೂರ್ಣಾಹುತಿ ನಡೆಯಿತು. ಈ ಸಂದರ್ಭ ಶಿಬರೂರು ಗೋಪಾಲಕೃಷ್ಣ ತಂತ್ರಿಗಳು ಮಾತನಾಡಿ, ಶ್ರೀದೇವಿಯ ಆರಾಧನೆಯಿಂದ ಲೋಕಕಲ್ಯಾಣ ಸಾಧ್ಯ. ಅನನ್ಯ ಭಕ್ತಿಯಿಂದ ದೇವರನ್ನು ಆರಾಧಿಸಿದರೆ ಮನಸ್ಸಿಗೆ ನೆಮ್ಮದಿ ಸಿಗುವುದರ ಜೊತೆಗೆ ಜೀವನದಲ್ಲಿ ಸಾರ್ಥಕ್ಯ ಪಡೆಯಬಹುದು ಎಂದರು.
ನಂತರ ಶ್ರೀ ದೇವಿಯ ದರ್ಶನ ನಡೆದು ಅನ್ನ ಸಂತರ್ಪಣೆ ಜರುಗಿತು. ಸಂಜೆ ಭಜನೆ, ರಾತ್ರಿ ಗುಳಿಗ ನೇಮ ನಡೆಯಿತು.
ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಮಾಜಿ ಮುಖ್ಯಾಧಿಕಾರಿ ಡಾ.ಹರಿಶ್ಚಂದ್ರ ಸಾಲಿಯಾನ್, ಉದಯ ಅಮೀನ್ ಮಟ್ಟು ಮತ್ತಿತರರು ಭೇಟಿ ನೀಡಿ, ಪ್ರಸಾದ ಸ್ವೀಕರಿಸಿದರು.
Kshetra Samachara
28/02/2021 10:11 am