ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶ್ರೀ ಕ್ಷೇತ್ರ ಪರ್ಪಲೆಗಿರಿಯಲ್ಲಿ ಸಿರಿ ಸಿಂಗಾರ ನೇಮೋತ್ಸವ ಸಂಪನ್ನಗೊಂಡಿತು.
ಹಿಂದು ಜಾಗರಣ ವೇದಿಕೆ ವತಿಯಿಂದ ನಡೆದ ನೇಮೋತ್ಸವದಲ್ಲಿ ಸಾವಿರಾರು ಆಸ್ತಿಕರು ಭಾಗಿಯಾದರು.
ಕಾರ್ಕಳದ ಪರ್ಪಲೆಗುಡ್ಡದಲ್ಲಿ ಶ್ರೀ ಕಲ್ಲುರ್ಟಿ- ಶ್ರೀ ರಕ್ತೇಶ್ವರಿ ದೈವ ಸಾನಿಧ್ಯವಿದೆಯೆಂದು ಇತ್ತೀಚೆಗೆ ತಿಳಿದುಬಂದಿತ್ತು. ಈ ಗುಡ್ಡದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆಯೂ ನಡೆದಿದ್ದು, ಈ ಪುಣ್ಯಕಾರ್ಯಕ್ರಮ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದ ಸಂಗತಿಯಾಗಿತ್ತು.
ಪರ್ಪಲೆಗಿರಿಯ ತುದಿಯಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾವಿರಾರು ಜನರು ಸೇರಿದ್ದು, ದೇವರ ನಾಮಸಂಕೀರ್ತನೆಯನ್ನು ಹಾಡಿದರು. ಶ್ರೀ ಧರ್ಮ ದೈವಗಳ ಪ್ರತಿಜ್ಞಾಪೂರ್ವಕ ಬೃಹತ್ ಶೋಭಾಯಾತ್ರೆಯಲ್ಲಿ ಸಾವಿರಾರು ಆಸ್ತಿಕರು ಪಾಲ್ಗೊಂಡು ಕೃತಾರ್ಥರಾದರು.
Kshetra Samachara
16/02/2021 02:13 pm