ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಪಡುಪಣಂಬೂರು: ಶ್ರೀ ಉಮಾಮಹೇಶ್ವರ ದೇವಸ್ಥಾನ ಜಾತ್ರೋತ್ಸವ ಸಂಪನ್ನ

ಮುಲ್ಕಿ: ಪಡುಪಣಂಬೂರು ಹೊಯಿಗೆಗುಡ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ರಥೋತ್ಸವ ಬ್ರಹ್ಮಶ್ರೀ ವೇದವ್ಯಾಸ ತಂತ್ರಿ ಅವರ ನೇತೃತ್ವದಲ್ಲಿ ನಡೆಯಿತು.

ಸೋಮವಾರ ಬೆಳಿಗ್ಗೆ ಕವಾಟೋದ್ಘಾಟನೆ, ಮಹಾಭಿಷೇಕ ಅಲಂಕಾರ, ಪೂಜೆ ಪ್ರಸಾದ ವಿತರಣೆ, ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ ಶ್ರೀ ನಾಗದೇವರಿಗೆ ಪಂಚಾಮೃತ ಅಭಿಷೇಕ, ರಾತ್ರಿ ಲಚ್ಚಿಲು ಸಂಕೇಸ, ಶ್ರೀ ಜಾರಂದಾಯ ದೈವದ ಭಂಡಾರ ಬಂದು ರಾತ್ರಿ ಶ್ರೀ ದೇವರ ಬಲಿ ಹೊರಟು ಓಕುಳಿ ಬಲಿಯಾಗಿ ಶ್ರೀ ಗೌರಿಶಂಕರ ದೇವಸ್ಥಾನದಲ್ಲಿ ಕಟ್ಟೆ ಪೂಜೆ, ಮಹಾರಥೋತ್ಸವ ನಡೆಯಿತು.

ಬಳಿಕ ಅವಭೃತ ಸ್ನಾನ, ಜಳಕದ ಬಲಿ, ಶ್ರೀ ದೈವ- ದೇವರ ಭೇಟಿ, ಧ್ವಜ ಅವರೋಹಣ ನಡೆಯಿತು. ನಂತರ ಶ್ರೀ ಜಾರಂದಾಯ ದೈವದ ಕೋಲ, ಬಲಿ ಪ್ರಸಾದ ವಿತರಣೆ, ಶ್ರೀ ಜಾರಂದಾಯ ದೈವದ ಭಂಡಾರ ನಿರ್ಗಮನವಾಯಿತು.

ಈ ಸಂದರ್ಭ ಆಡಳಿತ ಮೊಕ್ತೇಸರ ರಂಗನಾಥ ಭಟ್ ಮಾತನಾಡಿ, ಮಾ.11 ರಂದು ಶ್ರೀ ದೇವರಿಗೆ ಮಹಾರಾತ್ರಿ ಉತ್ಸವ ನಡೆಯಲಿದ್ದು, ಸಾಯಂಕಾಲ ರಂಗಪೂಜೆ ಉತ್ಸವ ಬಲಿ, ಅನ್ನ ಸಂತರ್ಪಣೆ ನಡೆಯಲಿದೆ ಎಂದರು.

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿದಾಸ್ ಭಟ್, ಹಳೆಯಂಗಡಿ ಪಿಸಿಎ ಅಧ್ಯಕ್ಷ ಸತೀಶ್ ಭಟ್, ನಿರ್ದೇಶಕ ಶ್ಯಾಮ್ ಪಡುಪಣಂಬೂರು ಮತ್ತಿತರರು ಉಪಸ್ಥಿತರಿದ್ದರು

Edited By : Nagesh Gaonkar
Kshetra Samachara

Kshetra Samachara

02/02/2021 03:12 pm

Cinque Terre

8.85 K

Cinque Terre

0

ಸಂಬಂಧಿತ ಸುದ್ದಿ