ಮುಲ್ಕಿ: ಸಮಾಜದ ಒಳಿತಿಗಾಗಿ ಏನಾದರೂ ಕೊಡುಗೆಯನ್ನು ನೀಡಬೇಕಾದರೆ ಸಮಾಜದ ಅಭಿವೃದ್ಧಿಗೆ ಸೇವೆ ಮಾಡಬೇಕೆನ್ನುವ ಆಸಕ್ತಿ ನಮ್ಮಲ್ಲಿ ಇರಬೇಕು. ಖಂಡಿತವಾಗಿಯೂ ಸಮಾಜ ಸೇವೆಯಿಂದ ನಮ್ಮ ಜೀವನವು ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದ್ದಾರೆ.
ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಭಾಂಗಣದಲ್ಲಿ ಪುನರೂರು ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಜನವಿಕಾಸ ಸಮಿತಿ ಮುಲ್ಕಿಯ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಜನವಿಕಾಸ ಸಮಿತಿ ಮುಲ್ಕಿಯ ನೂತನ ಅಧ್ಯಕ್ಷರಾದ ಪ್ರಾಣೇಶ್ ಭಟ್ ದೇಂದಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ದಾಮೋದರ ಶೆಟ್ಟಿ ಕೊಡೆತ್ತೂರು ರವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಅರ್ಚಕ ಗುರುಮೂರ್ತಿ ರಾವ್, ಪುನರೂರು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಜನವಿಕಾಸ ಸಮಿತಿ ಮುಲ್ಕಿಯ ಉಪಾಧ್ಯಕ್ಷರಾದ ಶೋಭಾ ರಾವ್, ಕಾರ್ಯದರ್ಶಿಗಳಾದ ಶಶಿಕರ ಕೆರೆಕಾಡು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಪಿ .ಎಸ್. ಸುರೇಶ ರಾವ್, ಗೀತಾ ಶೆಟ್ಟಿ, ಭಾಗ್ಯ ರಾಜೇಶ್, ಜೀವನ್ ಶೆಟ್ಟಿ, ಆನಂದ ಮೇಲಾಂಟ ಉಪಸ್ಥಿತರಿದ್ದರು.ಜಿತೇಂದ್ರ ವಿ ರಾವ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
01/02/2021 11:38 am