ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಲ ಕಿನಾರೆಯಲ್ಲಿ ಕೋವ್ಯಾಕ್ಸಿನ್ ಗೆ ಸ್ವಾಗತ; ವೆಲ್ ಕಂ ವ್ಯಾಕ್ಸಿನ್ ಎಂದ ಸ್ಯಾಂಡ್ ಥೀಂ ಉಡುಪಿ

ಉಡುಪಿ: ಕೊರೋನಾ ಹಾವಳಿಯಿಂದ ಇಡೀ ವಿಶ್ವವೇ ಹೈರಾಣಾಗಿದೆ. ಅದೆಷ್ಟೋ ಮಂದಿ ನಲುಗಿದ್ದಾರೆ. ಇನ್ನೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ. ಆದರೆ, ಇಂದಿನ ದಿನ ಭಾರತೀಯರು ಕೊಂಚ ನಿರಾಳರಾಗುವ ದಿನ. ಯಾಕೆಂದ್ರೆ ಇಂದಿನಿಂದ ಕೋವ್ಯಾಕ್ಸಿಕ್ ಚುಚ್ಚುಮದ್ದು ನೀಡಲಾಗುತ್ತಿದೆ. ಕೋವಿಡ್ ಭೀತಿಯಿಂದಲೇ ನೀವೇನಾದ್ರೂ ಕೋಟೇಶ್ವರ ಹಳೆ - ಅಳಿವೆ ಕೋಡಿ ಬೀಚ್ ಗೆ ಭೇಟಿ ನೀಡಿದ್ರೆ ಮತ್ತಷ್ಟು ಖುಷಿಯಾಗ್ತಿರಾ...ಯಾಕೆಂದ್ರೆ, ಕಡಲ ತಟದಲ್ಲಿ 'ವೆಲ್ ಕಂ ವ್ಯಾಕ್ಸಿನ್' ಶೀರ್ಷಿಕೆಯಡಿ ಮರಳು ಶಿಲ್ಪವೊಂದು ನಿಮ್ಮನ್ನು ಸ್ವಾಗತಿಸುತ್ತದೆ.7 ಇಂಚು ಅಗಲ ಮತ್ತು 4 ಅಡಿ ಎತ್ತರದ ಈ ಮರಳು ಶಿಲ್ಪವನ್ನು 'ಸ್ಯಾಂಡ್ ಥೀಂ' ಉಡುಪಿ ತಂಡವು ರಚಿಸಿದೆ. ಕಲಾವಿದರಾದ ಹರೀಶ್ ಸಾಗಾ, ರಾಘವೇಂದ್ರ, ಜೈ ನೇರಳಕಟ್ಟೆಯವರ ಕೈಚಳಕ ಈ ಮರಳು ಶಿಲ್ಪದಲ್ಲಿದೆ.

Edited By : Nagesh Gaonkar
Kshetra Samachara

Kshetra Samachara

16/01/2021 07:49 pm

Cinque Terre

19.31 K

Cinque Terre

1

ಸಂಬಂಧಿತ ಸುದ್ದಿ