ಉಡುಪಿ: ಮಕರ ಸಂಕ್ರಮಣ ದಿನವಾದ ಇಂದು ಶ್ರೀಕೃಷ್ಣ, ಮುಖ್ಯಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ತೆಪ್ಪೋತ್ಸವ, ಕೃಷ್ಣಮಠದ ವಾರ್ಷಿಕ ಜಾತ್ರೆಯಾಗಿರುವ ಸಪ್ತೋತ್ಸವ ಸಂಪನ್ನಗೊಂಡಿತು.
ಇಂದು ಈ ತಿಂಗಳ ಒಂಬತ್ತರಂದು ಪ್ರಾರಂಭಗೊಂಡ ಸಪ್ತೋತ್ಸವದ ಕೊನೆಯ ದಿನವೂ ಹೌದು.ಉತ್ಸವದ ಮೊದಲ ದಿನ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಸುವರ್ಣ ಪಲ್ಲಕ್ಕಿಯಲ್ಲಿರಿಸಿ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಸಲಾಗಿತ್ತು.
ಮಹಾಪೂಜೆ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರು, ಗರುಡ ರಥದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಗಳನ್ನು ಸ್ಥಾಪಿಸಿ ರಥೋತ್ಸವ ನೆರವೇರಿಸಲಾಯಿತು.ಸಪ್ತೋತ್ಸವದಂದು ಮೂರು ರಥಗಳನ್ನು ರಥಬೀದಿಯಲ್ಲಿ ಪ್ರದಕ್ಷಿಣೆ ಹಾಕಲಾಗುತ್ತದೆ.
ನಾಳೆ ಹಗಲು ರಥೋತ್ಸವ ಅಥವಾ 'ಚೂಣೋತ್ಸವ' ನೆರವೇರಲಿದ್ದು,ಕೋವಿಡ್ ಕಾರಣದಿಂದಾಗಿ ಭಕ್ತರ ಸಂದಣಿ ತಪ್ಪಿಸಲು ಪಾಸ್ ವ್ಯವಸ್ಥೆ ಮಾಡಲಾಗಿದೆ.
Kshetra Samachara
14/01/2021 10:26 pm