ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ ಮಂಡೆಕೋಲಿನಲ್ಲಿ ಜಾತ್ರೋತ್ಸವ: ಮೈ ನವಿರೇಳಿಸಿದ ಅಡ್ಡಣಪೆಟ್ಟು

ಸುಳ್ಯ:ಮಂಡೆಕೋಲು:ಜಗಳ,ಗಲಾಟೆ ಮಾಡದೆ ಪ್ರೀತಿ, ಸೌಹಾರ್ದತೆಯಿಂದ ಜನರು ಬದುಕಬೇಕು ಎಂಬ ಸಂದೇಶ ಸಾರುವ , ದೈವವೇ ಬಂದು ಜಗಳ ಬಿಡಿಸಿ ಸೌಹಾರ್ದತೆಯಿಂದ ಬಾಳಿ ಎಂಬ ಸಂದೇಶವನ್ನು ಜನ ಮಾನಸಕ್ಕೆ ಮುಟ್ಟಿಸುವ ವಿಶಿಷ್ಟ ಆಚರಣೆ ಅಡ್ಡಣಪೆಟ್ಟು ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ಪ್ರತಿ ವರ್ಷವೂ ನಡೆಯುತ್ತದೆ.

ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ನಡೆಯುವ ಉಳ್ಳಾಕುಲು ಹಾಗೂ ಪರಿವಾರ ದೈವದ ನೇಮದ ಸಂದರ್ಭದ ನಡೆಯುವ ವಿಶಿಷ್ಟವಾದ ಅಡ್ಡಣಪೆಟ್ಟು ಎಂಬ ಹೊಡೆದಾಟ’ದ ಸಂಪ್ರದಾಯ ಜಾತ್ರೋತ್ಸವದ ಪ್ರಮುಖ ಆಕರ್ಷಣೆ.

ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಅಡ್ಡಣಪೆಟ್ಟು ಇರಲಿಲ್ಲ.ಈ ಬಾರಿ ಭಕ್ತಿ‌ ಸಂಭ್ರಮದಿಂದ ನಡೆದ ಅಡ್ಡಣಪೆಟ್ಟು ಜನಾಕರ್ಷಣೆ ಪಡೆಯಿತು. ಶ್ರೀ ಮಹಾವಿಷ್ಣುಮೂರ್ತಿ ದೇವರ ಬಲಿ,ಬಟ್ಟಲು ಕಾಣಿಕೆ ನಡೆದ ಮರುದಿನ ಉಳ್ಳಾಕುಲು ಹಾಗೂ ಪರಿವಾರ ದೈವದ ನೇಮ ನಡೆಯುವುದು ಸಂಪ್ರದಾಯ.ಮಂಗಳವಾರ ನಡೆದ ನೇಮದಲ್ಲಿ ಬೆಳಿಗ್ಗೆ ನಾಲ್ಕೂರಿನ ಪ್ರತಿನಿಧಿಗಳ ನಡುವೆ ತುಳುನಾಡಿನ ಅತ್ಯಂತ ಅಪರೂಪದ ‘ ಅಡ್ಡಣ ಪೆಟ್ಟು ಆಚರಣೆ ನಡೆಯಿತು.

ಹಳೆಯ ಸಂಪ್ರದಾಯವನ್ನು ಪ್ರತಿನಿಧಿಸಿ ಸಾಂಕೇತಿಕವಾಗಿ ನಡೆಯುವ ಈ ಹೊಡೆದಾಟವನ್ನು ನೋಡಲು ನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ದೇವಸ್ಥಾನಕ್ಕೆ ಸಂಬಂಧಪಟ್ಟ ಕೇನಾಜೆ- ಮಾವಜಿ ,ಮುರೂರು- ಬೊಳುಗಲ್ಲು ಎಂಬ ನಾಲ್ಕು ಗೌಡ ಮನೆತನಗಳು ಇಲ್ಲಿವೆ. ಉಳ್ಳಾಕುಲು ನೇಮದ ಸಂದರ್ಭ ಇದೇ ನಾಲ್ಕು ಮನೆತನದ ಪ್ರತಿನಿಧಿಗಳು ಬೆತ್ತದಿಂದ ತಯಾರಿಸಿದ ಗುರಾಣಿಯ ಮಾದರಿಯ ಅಡ್ಡವನ್ನು ಹಿಡಿದು ದಂಡದಿಂದ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ . ಉಳ್ಳಾಕುಲು ದೈವ ಬಂದು

ಹೊಡೆದಾಟವನ್ನು ಬಿಡಿಸುತ್ತಾರೆ. ಈ ವಿಶಿಷ್ಟ ಆಚರಣೆಯನ್ನು ಭಕ್ತರು ಭಕ್ತಿ ಭಾವದಿಂದ ಕಣ್ತುಂಬಿಕೊಂಡರು.

Edited By : Nagesh Gaonkar
Kshetra Samachara

Kshetra Samachara

26/04/2022 10:15 pm

Cinque Terre

5.7 K

Cinque Terre

0

ಸಂಬಂಧಿತ ಸುದ್ದಿ