ಉಡುಪಿ: ಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ಚತುರ್ಥ ಪರ್ಯಾಯ ಪೀಠವನ್ನೇರಲಿರುವ ಅಂಗವಾಗಿ ಪುತ್ತಿಗೆ ಸುಗುಣೇಂದ್ರ ಶ್ರೀಗಳು ಸಂಕಲ್ಪಿಸಿರುವ ಕೋಟಿ ಗೀತಾ ಲೇಖನಯಜ್ಞದ ಕೋಟಿ ಲೇಖನ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಲೇಖನ ಯಜ್ಞದ ಕನ್ನಡ ಆವೃತ್ತಿಯನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ಬಿಡುಗಡೆ ಗೊಳಿಸಿ, ಭಗವದ್ಗೀತೆಯಲ್ಲಿ ಎಲ್ಲದಕ್ಕೂ ಪರಿಹಾರ ಮತ್ತು ಮಾರ್ಗದರ್ಶನ ಇದೆ. ಶ್ರೀಗಳ ಉತ್ತಮ ಯೋಜನೆಗೆ ಭಗವಂತ ಅನುಗ್ರಹಿಸಲಿ ಎಂದು ಶುಭ ಕೋರಿದರು.
ಲೇಖನಯಜ್ಞ ಪುಸ್ತಕಗಳ ಇಂಗ್ಲಿಷ್ ಆವೃತ್ತಿಯನ್ನು ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯತೀರ್ಥರು ಉದ್ಘಾಟಿಸಿ, ಗಡಿಯಲ್ಲಿ ಸೈನಿಕರು ಎಚ್ಚರವಿರುವುದಕ್ಕೆ ನಾವಿಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಕೋಟಿ ಭಗವದ್ಗೀತೆಯ ಪುಸ್ತಕ ಬರೆಯುವ ಮೂಲಕ ದೇಶದ ಸೈನಿಕರ ಶಕ್ತಿಗಾಗಿ ಪ್ರಾರ್ಥಿಸಿ ಎಂದು ಕರೆ ನೀಡಿದರು.
ಒಟ್ಟು ಒಂದು ಕೋಟಿ ಜನರಿಂದ ಭಗವದ್ಗೀತೆಯನ್ನು ಬರೆಸಿ, ಅದನ್ನು ತಮ್ಮ ಪರ್ಯಾಯದ ಕೊನೆಗೆ ಶ್ರೀ ಕೃಷ್ಣನಿಗೆ ಸಮರ್ಪಿಸಲು ಪುತ್ತಿಗೆ ಶ್ರೀಗಳು ಸಂಕಲ್ಪಿಸಿದ್ದಾರೆ. ಪ್ರತಿದಿನ ಗೀತೆಯ 2 ಶ್ಲೋಕಗಳನ್ನು ಬರೆದರೆ 2 ವರ್ಷದಲ್ಲಿ ಗೀತಾ ಲೇಖನ ಪೂರ್ಣಗೊಳ್ಳುಲಿದೆ.
Kshetra Samachara
05/03/2022 03:12 pm