ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕುದ್ರೋಳಿಯಲ್ಲಿ ನವರಾತ್ರಿ ಸಡಗರ; ದೇವರ ಬಲಿ ಉತ್ಸವ ಕಣ್ತುಂಬಿಕೊಂಡ ಭಕ್ತಾದಿಗಳು

ಮಂಗಳೂರು: ನವರಾತ್ರಿ ಉತ್ಸವ ಮಂಗಳೂರಿನ ವಿವಿಧ ದೇವಸ್ಥಾನಗಳಲ್ಲಿ ಆರಂಭಗೊಂಡಿದೆ. ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಸರಕಾರದ ನಿಯಮಾವಳಿ ಪ್ರಕಾರ ಸರಳವಾಗಿಯೇ ಉತ್ಸವ ನಡೆಯತ್ತಿದೆ. ನವರಾತ್ರಿ ಉತ್ಸವದ ಎರಡನೇ ದಿನ ದೇಗುಲಗಳಲ್ಲಿ ಭಕ್ತರ ಸಂಖ್ಯೆ ತುಸು ಕಡಿಮೆಯಾಗಿದೆ. ನಗರದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಶಕ್ತಿಯ ಪ್ರತೀಕವಾದ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ನವರಾತ್ರಿ ಆಚರಿಸುವುದು ಮಂಗಳೂರು ದಸರಾ ವೈಶಿಷ್ಟ್ಯಿ, ಭಾನುವಾರ ರಾತ್ರಿ ಕುದ್ರೋಳಿ ಕ್ಷೇತ್ರದಲ್ಲಿ ದೇವರ ಬಲಿ ಉತ್ಸವ ಹಾಗೂ ವಿಶೇಷ ಪೂಜೆಗಳು ನಡೆದವು. ನವರಾತ್ರಿ ಪ್ರಯುಕ್ತ ಪ್ರತಿದಿನ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಸರಕಾರದ ಅದೇಶದಂತೆ ಸಾಮಾಜಿಕ ಅಂತರ ಪಾಲಿಸಿ,ಮಾಸ್ಕ್ ಧರಿಸುವ ಮೂಲಕ ಭಕ್ತರು

ದೇವರ ದರ್ಶನ ಮಾಡಿ, ಬಲಿ ಉತ್ಸವ ಕಣ್ತುಂಬಿಕೊಂಡರು.

Edited By : Manjunath H D
Kshetra Samachara

Kshetra Samachara

19/10/2020 01:54 pm

Cinque Terre

16.08 K

Cinque Terre

0

ಸಂಬಂಧಿತ ಸುದ್ದಿ