ಮುಲ್ಕಿ: ಹಳೆಯಂಗಡಿ ಇಂಡಿಯನ್ ಯೋಗ ಮಂದಿರದಲ್ಲಿ ವಿಜಯ ಮಾಸ್ಟರ್ ಟ್ರಸ್ಟ್ ಹಾಗೂ ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ ಸಹಯೋಗದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ಕಾನೂನು ಮಾಹಿತಿ ಹಾಗೂ ಸನ್ಮಾನ ನಡೆಯಿತು. ಮುಲ್ಕಿ ಸಿಎಸ್ಐ ಯುನಿಟಿ ಚರ್ಚ್ ಸಭಾ ಪಾಲಕರಾದ ರೆ. ಎಡ್ವರ್ಡ್ ಎಸ್. ಕರ್ಕಡ ಉದ್ಟಾಟಿಸಿದರು. ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಹಿರಿಯ ನಾಗರಿಕರ ದಿನದ ಮುಖ್ಯ ಉದ್ದೇಶವೆಂದರೆ ಕೌಶಲ್ಯ ಮತ್ತು ಜ್ಞಾನದ ಮೂಲಕ ಉತ್ತೇಜಿಸಲು ಹಿರಿಯರ ಸಾಧನೆ ಗುರುತಿಸಲು ಯೋಗ ಕ್ಷೇಮಕ್ಕಾಗಿ ದಿನ ಗುರುತಿಸಲಾಗಿದೆ ಎಂದರು.
ಅಧ್ಯಕ್ಷತೆಯನ್ನು ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ಅಧ್ಯಕ್ಷ ಡೇನಿಯಲ್ ದೇವರಾಜ್ ವಕೀಲರು ವಹಿಸಿ ಮಾತನಾಡಿ ಹಿರಿಯ ನಾಗರಿಕರಿಗೆ ನಮ್ಮ ಕೃತಜ್ಞತೆ, ಶುಭಾಶಯ ನೀಡುವುದರ ಜೊತೆಗೆ ಯುವಜನಾಂಗ ಬೆಂಬಲ ನೀಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಹಳೆಯಂಗಡಿಯ ಸಮಾಜಸೇವಕರಾದ ಎಸ್. ಪಿ. ಅಬ್ದುಲ್ ಹಮೀದ್, ಹಿರಿಯ ನಾಗರಿಕರಾದ ನ್ಯಾನ್ಸಿ ಕರ್ಕಡ ಹಳೆಯಂಗಡಿ, ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಪಿ. ಚೆಂಗಪ್ಪ, ಹಳೆಯಂಗಡಿ ಸಿಎಸ್ಐ ಚರ್ಚ್ ಸಭಾ ಪಾಲಕ ರೆ. ವಿನಯಲಾಲ್ ಬಂಗೇರ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ವಕೀಲ ಲೋಯ್ಡ್ ಡಿಮೆಲ್ಲೋ ಅವರು "ಹಿರಿಯ ನಾಗರಿಕರ ಕಾನೂನು" ಮತ್ತು ಮಂಗಳೂರು ನ್ಯಾಯಾಂಗ ಇಲಾಖೆ ಶಿರಸ್ತೇದಾರರು ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್ "ಭಾರತದ ಸಂವಿಧಾನ ಹಾಗೂ ಹಿರಿಯ ನಾಗರಿಕರ ಕಾನೂನು ಪಾಲನೆ” ಬಗ್ಗೆ ಕಾನೂನು ಮಾಹಿತಿ ನೀಡಿದರು.
ಹಿರಿಯ ನಾಗರಿಕರಾದ ಮನೋರಮಾ ಹೆನ್ರಿ,ಕಾರ್ನಾಡು, ಮಾಜಿ ತಾ ಪಂ ಸದಸ್ಯೆ ಬೇಬಿ ಎಸ್. ಕೋಟ್ಯಾನ್, ಕೆಮ್ರಾಲ್ ಅವರನ್ನು ಗೌರವಿಸಲಾಯಿತು.
ವಿಜಯ ಮಾಸ್ಟರ್ ಟ್ರಸ್ಟಿನ ಟ್ರಸ್ಟಿ ಡಾರ್ವಿನ್ ಕರ್ಕಡ ವಂದಿಸಿದರು. ಸ್ಯಾಮ್ ನಿರೂಪಿಸಿದರು.
Kshetra Samachara
30/09/2020 03:08 pm