ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ 75ರ ತಿಂಗಳ ಕಾರ್ಯಕ್ರಮ

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 75ನೇ ತಿಂಗಳ ಕಾಯಕ್ರಮ ಇತ್ತೀಚೆಗೆ ಗೊಂಬೆಮನೆಯಲ್ಲಿ ಜರುಗಿತು.

ಕುಂದಾಪುರದ ರಶ್ಮಿರಾಜ್ ಮತ್ತು ತಂಡದವರು ವಿಷ್ಣು ಸಹಸ್ರನಾಮ ಪಠಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾಗವತ ಉಮೇಶ ಸುವರ್ಣ ರವರು ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥಿಸಿದರು.

ಬಹುಮುಖ ಪ್ರತಿಭೆಯ, ವಿಶೇಷ ವ್ಯಕ್ತಿತ್ವದ ಜನಾರ್ದನ ಹಂದೆಯವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ತದನಂತರ ಇತ್ತೀಚೆಗೆ ನಿಧನರಾದ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ, ಉಪ್ಪಿನಕುದ್ರು ಇದರ ಆರ್ಥಧಾರಿ ನಾರಾಯಣ ಬಿಲ್ಲವರಿಗೆ ನುಡಿ ನಮನ ಸಲ್ಲಿಸಲಾಯಿತು.

ಜನಾರ್ದನ ಹಂದೆಯವರ ಸಂಗೀತ ಸಂಜೆ ನೆರೆದ ಪ್ರೇಕ್ಷಕರ ಮನ ಸೆಳೆಯಿತು. ಮದ್ದಲೆಗಾರ ದೇವದಾಸ ಕೂಡ್ಲಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ವಿಶ್ವಂಭರ ಐತಾಳ್ ಅಸೋಡು, ಜನಾರ್ದನ ಹಂದೆ, ಸುಜಯೀಂದ್ರ ಹಂದೆ, ಶ್ರೀಪತಿ ಆಚಾರ್ಯ, ಡಾ. ಕಾಶೀನಾಥ್ ಪೈ, ರಾಮ ಎಂ. ಚಂದನ್, ಶಂಕರ ಬಿಲ್ಲವ, ರಾಘವೇಂದ್ರ ನೆಂಪು ಹಾಗೂ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು. ನಾಗೇಶ್ ಶ್ಯಾನುಭಾಗ್, ಬಂಟ್ವಾಡಿ ನಿರೂಪಿಸಿ, ಶಿಕ್ಷಕ ಉದಯ ಭಂಡಾ‌ರ್ಕಾರ್ ವಂದಿಸಿದರು.

Edited By : PublicNext Desk
Kshetra Samachara

Kshetra Samachara

14/09/2022 02:28 pm

Cinque Terre

2.53 K

Cinque Terre

0