ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಬಾರ್ಕೂರಿನಲ್ಲೊಂದು ಅವಿಸ್ಮರಣೀಯ ಮದುವೆ: ಏನಿದರ ವಿಶೇಷತೆ?

ವರದಿ: ರಹೀಂ ಉಜಿರೆ

ಬ್ರಹ್ಮಾವರ: ಮದುವೆಗಳು ಸ್ವರ್ಗದಲ್ಲೇ ನಡೆದಿರುತ್ತವೆ ಅಂತಾರೆ.ಇಂತಹ ಮದುವೆ ಸಮಾರಂಭವನ್ನು ಅವಿಸ್ಮರಣೀಯಗೊಳಿಸಲು ಜನರು ಪ್ರಯತ್ನಿಸುತ್ತಾರೆ. ಬಾರ್ಕೂರಿನ ಗುರುದೇವ ಭವನದಲ್ಲಿ ಜರುಗಿದ ಮದುವೆ ದಿಬ್ಬಣವೊಂದು ವಿಶೇಷತೆಯಿಂದ ಕೂಡಿತ್ತು.

ಈ ಮದುವೆಯ ವಿಶೇಷತೆ ಏನಪ್ಪಾ ಅಂದ್ರೆ ಅಂಬಾಸಿಡರ್ ಕಾರ್ ! ಹೌದು ,ಮದುವೆ ಸಮಾರಂಭಕ್ಕೆ ಬಂದವರು ತಪ್ಪದೇ ನೋಡಿದ್ದು ಈ ಕಾರನ್ನು.ಮದುವೆ ಹಾಲ್ ಎದುರುಗಡೆ 50 ವರ್ಷ ಹಳೆದ ಈ ಅಂಬಾಸಡರ್ ಕಾರನ್ನು ಸಿಂಗರಿಸಿ ನಿಲ್ಲಿಸಲಾಗಿತ್ತು. ಬಂದ ಸಂಬಂಧಿಕರು ಬಂಧುಗಳು ಕಾರನ್ನು ತದೇಕಚಿತ್ತದಿಂದ ನೋಡಿ ಚಕಿತಗೊಂಡರು.ಯುವ ಜನತೆಯಂತೂ ಕಾರಿನ ಪಕ್ಕ ನಿಂತು ಸೆಲ್ಪಿ ತೆಗೆದುಕೊಳ್ಳುತ್ತಿದ್ದರು.

ಬಾರ್ಕೂರು ಕಾಳಿಕಾಂಭಾ ದೇವಸ್ಥಾನದ ಬಳಿಯ ಮಂಜಪ್ಪ ಪೂಜಾರಿಯವರ ಮಗ ನಿತಿನ್ ಮತ್ತು ಪೂಜಿತಾರ ಮದುವೆ ಸಮಾರಂಭ ಇದಾಗಿತ್ತು.ಮದುವೆ ದಿಬ್ಬಣಕ್ಕೆ ಅಜ್ಜನ 50 ವರ್ಷ ಹಳೆಯ ಕಾಲದ ಅಂಬಾಸಡರ್ ಕಾರಿನಲ್ಲಿ ಹೊಸ ಮದುಮಕ್ಕಳು ಮನೆಗೆ ಹೋಗಿದ್ದು ವಿಶೇಷವಾಗಿತ್ತು.1972 ರಲ್ಲಿ ಜಾರು ಪೂಜಾರಿಯವರು 22 ಸಾವಿರ ರೂಪಾಯಿಗೆ ಎಂ. ವೈ. ಜಿ 1910 ನಂಬರಿನ ಅಂಬಾಸಡರ್ ಕಾರು ಖರೀದಿಸಿದ್ದರು. ಅದನ್ನು ಈಗೊಂದು 10 ವರ್ಷದ ಹಿಂದಿನತನಕ ಅವರೇ ಚಲಾಯಿಸುತ್ತಿದ್ದರು.ಬಳಿಕ ಅವರು ನಿಧನರಾದರು.

ಅಜ್ಜ ಮತ್ತು ತಂದೆಯೊಂದಿಗೆ ಪ್ರತೀ ದಿನ ಕಾರನ್ನು ತೊಳೆಯುವಾಗ ಸಹಕಾರ ನೀಡುತ್ತಿದ್ದ ನಿತಿನ್‍ಗೆ ಅಜ್ಜನ ಕಾರಿನ ಬಗ್ಗೆ ವಿಪರೀತ ಮೋಹ.ಅಂಬಾಸಿಡರ್ ಕಾರನ್ನು ಸಾವಿರಾರು ರೂಪಾಯಿ ವೆಚ್ಚ ಮಾಡಿ ಕಾರನ್ನು ಇಂದಿಗೂ ಕೂಡಾ ಸುಸ್ಥಿತಿಯಲ್ಲಿ ಇರಿಸಿದ್ದಾರೆ. ಪ್ರತೀ ದಿನ ಒಮ್ಮೆ ಅದನ್ನು ಚಾಲನೆ ಮಾಡುವ ಪರಿಪಾಟ ಇಂದಿಗೂ ಇದೆ.

ಇದೀಗ ಮನೆಯಲ್ಲಿ ಬೇರೆ ಹೊಸ ವಾಹನ ಇದ್ದರೂ ಕೂಡಾ ಆಧುನಿಕತೆಗೆ ಮಾರು ಹೋಗದ ಮೊಮ್ಮಗ ಅಜ್ಜನ ಹಳೆ ಕಾರಲ್ಲೇ ದಿಬ್ಬಣ ನಡೆಸಿದರು. ಅಜ್ಜನ ಹಳೆ ಕಾರಿನಲ್ಲಿ ಮದು ಮಕ್ಕಳು ಸಾಗುವಾಗ ದಾರಿ ಉದ್ದಕ್ಕೂ ಜನರು ಆಶ್ಚರ್ಯ ಮತ್ತು ಸಂತೋಷದಿಂದ ಕೈ ಬೀಸಿದ್ದು ಈ ಮದುವೆಯನ್ನು ಅವಿಸ್ಮರಣೀಯಗೊಳಿಸಿತು.

Edited By : Shivu K
Kshetra Samachara

Kshetra Samachara

13/02/2022 11:11 am

Cinque Terre

21.83 K

Cinque Terre

1

ಸಂಬಂಧಿತ ಸುದ್ದಿ