ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: " ಅಧಿಕಾರ ದರ್ಪ, ಅಹಂಕಾರ ಯಾವುದೂ ಶಾಶ್ವತವಲ್ಲ"

ಮುಲ್ಕಿ: ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಲ್ಕಿಯ ವಿಶೇಷ ತಹಸೀಲ್ದಾರ್ ಆಗಿ ಉತ್ತಮ ಕರ್ತವ್ಯ ನಿರ್ವಹಿಸಿದ ಮಾಣಿಕ್ಯ ಎನ್ . ಅವರ ಕಾರ್ಯವೈಖರಿ ಶ್ಲಾಘನೀಯ ಎಂದು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ಹೇಳಿದರು.

ಅವರು ಮುಲ್ಕಿಯ ವಿಶೇಷ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿ ರಾ.ಹೆ. ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಭಡ್ತಿ ಹೊಂದಿ ವರ್ಗಾವಣೆಗೊಳ್ಳುತ್ತಿರುವ ಮಾಣಿಕ್ಯ ಎನ್. ಅವರಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾಣಿಕ್ಯ ಎನ್. ಮಾತನಾಡಿ, ಸೇವೆಯಲ್ಲಿ ಅಧಿಕಾರ ದರ್ಪ, ಅಹಂಕಾರ ಯಾವುದೂ ಶಾಶ್ವತ ಅಲ್ಲ. ಮುಲ್ಕಿ ಹೋಬಳಿಯ ಗ್ರಾಮೀಣ ಪ್ರದೇಶದಲ್ಲಿ ನಾಗರಿಕರ ಸಮಸ್ಯೆಗಳನ್ನು ಆದಷ್ಟು ಪರಿಹರಿಸುವ ಯತ್ನ ಮಾಡಿದ್ದೇನೆ, ಇದಕ್ಕೆ ನಾಗರಿಕರೂ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದರು. ಕಿಲ್ಪಾಡಿ ಪಂಚಾಯತ್ ವಿಎ ಆಶ್ರಿತಾ, ಅತಿಕಾರಿಬೆಟ್ಟು ಗ್ರಾ.ಪಂ. ವಿಎ ಸುನಿಲ್ ಕುಮಾರ್ ಅನಿಸಿಕೆ ವ್ಯಕ್ತಪಡಿಸಿದರು. ಮುಲ್ಕಿ ನ. ಪಂ. ಮುಖ್ಯಾಧಿಕಾರಿ ಚಂದ್ರ ಪೂಜಾರಿ ಉಪಸ್ಥಿತರಿದ್ದರು. ಉಪ ತಹಸೀಲ್ದಾರ್ ಕೆ. ಬಾಲಚಂದ್ರ ಸ್ವಾಗತಿಸಿದರು. ಪ್ರಭಾರ ಕಂದಾಯ ನಿರೀಕ್ಷಕ ಸಂತೋಷ್ ನಿರೂಪಿಸಿದರು. ಅಂಬಿಕಾ ಆಚಾರ್ಯ ವಂದಿಸಿದರು.

Edited By : Nagesh Gaonkar
Kshetra Samachara

Kshetra Samachara

07/12/2020 04:58 pm

Cinque Terre

9.96 K

Cinque Terre

1

ಸಂಬಂಧಿತ ಸುದ್ದಿ