ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೊರೋನಾ ನಡುವೆಯೂ ಸಂಘದ ಸಾಧನೆ ತೃಪ್ತಿಕರ: ರಂಗನಾಥ ಶೆಟ್ಟಿ

ಮುಲ್ಕಿ: ಮುಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘ (ನಿ) ದ 44 ವಾರ್ಷಿಕ ಮಹಾಸಭೆಯು ಮುಲ್ಕಿಯ ಶ್ರೀ ನಾರಾಯಣ ಗುರು ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ಯನ್ನು ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ವಹಿಸಿ ಮಾತನಾಡಿ ಕೊರೋನ ನಡುವೆಯೂ ಸಂಘದ ನಿರ್ದೇಶಕರ, ಗ್ರಾಹಕರ ಸಹಕಾರದೊಂದಿಗೆ ಸಂಘದ ಕಾರ್ಯ ವೈಖರಿ ತೃಪ್ತಿಕರವಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಸಂಘವನ್ನು ಮತ್ತಷ್ಟು ಮುನ್ನಡೆಸಬೇಕಾಗಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ ಆಡಳಿತ ನಿರ್ದೇಶಕರಾದ ಜೇಸನ್ ಕ್ರಿಸ್ಟೋಫರ್ ಪುಟ್ಟಾಡೋ, ನಿರ್ದೇಶಕರಾದ ಗಂಗಾಧರ ವಿ.ಶೆಟ್ಟಿ,ಅಶೋಕ್ ಕುಮಾರ್ ಚಿತ್ರಾಪು, ತಿಮ್ಮಪ್ಪ ಶೆಟ್ಟಿ, ನರಸಿಂಹ. ಪೂಜಾರಿ, ದೇವಪ್ರಸಾದ್, ಪುಷ್ಪ ಎಂ, ಪದ್ಮಿನಿ ಶೆಟ್ಟಿ,ರಾಜೇಶ್ ಶೆಟ್ಟಿ,ರಾಮ ನಾಯ್ಕ್,ನಂಜುಂಡ ಆರ್.ಕೆ., ಶಾಖಾಧಿಕಾರಿ ಸುಬ್ರಮಣ್ಯ ಪ್ರಸಾದ್ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಕೋರೋನ ವಾರಿಯರ್ಸ್ ವೈದ್ಯರಾದ ಡಾ. ಶರತ್ ಶೆಟ್ಟಿ ಕಾರ್ನಾಡ್,

ಮೂಲ್ಕಿ ಬಿಲ್ಲವ ಸಂಘದ ನೂತನ ಅಧ್ಯಕ್ಷ ರಮೇಶ್ ಕೊಕ್ಕರಕಲ್, ಪ್ರಗತಿಪರ ಕೃಷಿಕರಾದ ಬಾಲಚಂದ್ರ ಸನಿಲ್ ಚಿತ್ರಾಪು, ಕೃಷ್ಣ ಶೆಟ್ಟಿ ಉಳೆಪಾಡಿ, ರಾಜ ಶೇರಿಗಾರ ಕೊಲ್ಲೂರು ಪದವು, ಮೀನಾಕ್ಷಿ ಶೆಟ್ಟಿ ಕಿಲ್ಪಾಡಿ ಭಂಡ ಸಾಲೆ, ರವರನ್ನು ಸನ್ಮಾನಿಸಲಾಯಿತು. 2019- 20 ನೇ ಸಾಲಿನ ಎಸೆಸೆಲ್ಸಿ ಪಿಯುಸಿ ಪರೀಕ್ಷೆ ಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಗಂಗಾಧರ ಶೆಟ್ಟಿ ಸ್ವಾಗತಿಸಿದರು. ಮನೋಹರ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Edited By : Manjunath H D
Kshetra Samachara

Kshetra Samachara

06/12/2020 03:10 pm

Cinque Terre

8.7 K

Cinque Terre

0

ಸಂಬಂಧಿತ ಸುದ್ದಿ