ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ : ಬಪ್ಪನಾಡು ದೇವಿಗೆ ದಾನಿಗಳಿಂದ ಪ್ರಭಾವಳಿ, ಚಿನ್ನದ ರುದ್ರಾಕ್ಷಿ ಸರ, ಬೆಳ್ಳಿಯ ಸರ ಸಮರ್ಪಣೆ

ಮುಲ್ಕಿ: ಬಪ್ಪನಾಡು ದುರ್ಗಾಪರಮೇಶ್ವರಿ ದೇವರಿಗೆ, ದಾನಿಗಳಾದ ದೇವಳದ ಬ್ರಹ್ಮಕಲಶ ಹಾಗೂ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸುಜಾತಾ ನಾರಾಯಣ ಶೆಟ್ಟಿ ದಂಪತಿಗಳಿಂದ ಶ್ರೀ ದೇವರಿಗೆ ರಜತ ಪ್ರಭಾವಳಿ, ಗಣಪತಿ ದೇವರಿಗೆ ಚಿನ್ನದ ರುದ್ರಾಕ್ಷಿ ಸರ ಹಾಗೂ ನರಸಿಂಹ ದೇವರಿಗೆ ಬೆಳ್ಳಿಯ ಸರವನ್ನು ಮೆರವಣಿಗೆ ಮೂಲಕ ಸಮರ್ಪಿಸಿದರು. ಈ ಸಂದರ್ಭ ದೇವಾಳದ ಅರ್ಚಕರಾದ ಶ್ರೀಪತಿ ಉಪಾಧ್ಯಾಯ ವಿಶೇಷ ಪ್ರಾರ್ಥನೆ ನಡೆಸಿ ದೇವಳದ ಜೀರ್ಣೋದ್ಧಾರಕ್ಕೆ ದಾನಿಗಳ ಸಹಕಾರ ಶ್ಲಾಘನೀಯವಾಗಿದ್ದು , ಕೋರೋನ ದಿನಗಳಲ್ಲಿಯೂ ದೇವಳದ ಅಭಿವೃದ್ಧಿಗೆ ದಾನಿಗಳು ಹಾಗೂ ಭಕ್ತರು ಮತ್ತಷ್ಟು ಚಿಂತನೆ ನಡೆಸುತ್ತಿರುವುದು ಉತ್ತಮ ಸಂಕೇತವಾಗಿದೆ. ದೇವರು ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯ ಗಳನ್ನು ನೀಡಿ ರಾಷ್ಟ್ರವನ್ನು ಕೊರೋನಾ ಮುಕ್ತಗೊಳಿಸಲಿ ಎಂದರು. ಈ ಸಂದರ್ಭ ಮಾಜೀ ಸಚಿವ ಅಭಯಚಂದ್ರ ಜೈನ್, ದೇವಳದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ, ಸುಹಾಸಿನಿ ಶೆಟ್ಟಿ, ಅರ್ಚಕರಾದ ನರಸಿಂಹ ಭಟ್, ಕಿಲ್ಪಾಡಿ ಭಂಡಸಾಲೆ ಶೇಖರ ಶೆಟ್ಟಿ, ಮುರಳೀಧರ ಭಂಡಾರಿ, ಅತುಲ್ ಕುಡ್ವ, ಧನಂಜಯ ಮಟ್ಟು, ಚಂದ್ರಶೇಖರ ಸುವರ್ಣ, ಜೀವನ್ ಶೆಟ್ಟಿ ಕಾರ್ನಾಡು, ಮಹಿಮ ಹೆಗ್ಡೆ, ಶಿವಶಂಕರ್, ಗೋಪಾಲಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

03/12/2020 10:39 am

Cinque Terre

9.33 K

Cinque Terre

0

ಸಂಬಂಧಿತ ಸುದ್ದಿ