ಮುಲ್ಕಿ: ಮುಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ವತಿಯಿಂದ ಮುಲ್ಕಿ ಬಿಲ್ಲವರ ಮಹಾಮಂಡಲ ಸಭಾಭವನದಲ್ಲಿ ಅಗಲಿದ ಬಿಲ್ಲವ ಮಹಾಮಂಡಲದ ಸ್ಥಾಪಕ ಅಧ್ಯಕ್ಷರಾದ ಜಯ ಸಿ. ಸುವರ್ಣ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಹಾಮಂಡಲದ ಉಪಾಧ್ಯಕ್ಷ ಚಂದ್ರಶೇಖರ ಸುವರ್ಣ ಮಾತನಾಡಿ, ಜಯ ಸಿ. ಸುವರ್ಣ ಅವರು ರಾಷ್ಟ್ರಾದ್ಯಂತ 242 ಬಿಲ್ಲವ ಸಂಘಗಳನ್ನು ಒಗ್ಗೂಡಿಸಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಸಂಘಟನೆ ಮೂಲಕ ಸಮಾಜಕ್ಕೆ ಚೈತನ್ಯ ನೀಡಿದ ಸ್ಫೂರ್ತಿಯ ಚೇತನ ಎಂದರು.
ಮುಲ್ಕಿ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಬಾಲಚಂದ್ರ ಸನಿಲ್ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರ, ಬ್ಯಾಂಕಿಂಗ್ ಸಹಿತ ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಿದ ಜಯ ಸಿ. ಸುವರ್ಣ ಅವರು ಮೇರು ವ್ಯಕ್ತಿತ್ವದವರಾಗಿದ್ದರು ಎಂದು ಹೇಳಿದರು.
ಮುಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕು ಬೆವೂರು, ಕೋಶಾಧಿಕಾರಿ ಯೋಗೀಶ್ ಕೋಟ್ಯಾನ್ ಚಿತ್ರಾಪು, ಜೊತೆ ಕೋಶಾಧಿಕಾರಿ ಶಿವಾಜಿ ಸುವರ್ಣ, ಜೊತೆ ಕಾರ್ಯದರ್ಶಿ ಗಂಗಾಧರ ಪೂಜಾರಿ ಬಾಳ , ಸಲಹೆಗಾರ ಮೋಹನ್ ದಾಸ್ ಪಾವೂರು ಭಂಡಾರ ಮನೆ, ಮುಲ್ಕಿ ನಾರಾಯಣಗುರು ಸಮೂಹ -ಸಂಸ್ಥೆಗಳ ಸಂಚಾಲಕ ಎಚ್.ವಿ. ಕೋಟ್ಯಾನ್, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಕೋಕರಕಲ್, ಕಾರ್ಯದರ್ಶಿ ಕಮಲಾಕ್ಷ ಬಡಗುಹಿತ್ಲು, ಕೋಶಾಧಿಕಾರಿ ಪ್ರಕಾಶ್ ಸುವರ್ಣ,ಉದ್ಯಮಿ ಶರತ್ ಸಾಲ್ಯಾನ್ ಮುಂಬೈ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
21/10/2020 12:24 pm