ಮುಲ್ಕಿ: ದ.ಕ. ಜಿಪಂ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಮಂಗಳೂರು ತಾಪಂ ಮತ್ತು ಕೆಮ್ರಾಲ್ ಗ್ರಾಪಂ ಸಹಯೋಗದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆ "ಸ್ವಚ್ಛೋತ್ಸವ- ನಿತ್ಯೋತ್ಸವ" ಮಾಸಾಚರಣೆ, ನೂತನ ತ್ಯಾಜ್ಯ ಸಂಗ್ರಹ ಘಟಕ , ಸ್ವಚ್ಛ ಸಂಕೀರ್ಣ ಬ್ರಾಂಡಿಂಗ್ ಲೋಕಾರ್ಪಣೆ, ವಿಶ್ವ ಕೈ ತೊಳೆಯುವ ದಿನಾಚರಣೆ, ಒಣ ತ್ಯಾಜ್ಯ ಸಂಗ್ರಹ ಘಟಕದ ಏಕರೂಪದ ಬ್ರಾಂಡಿಂಗ್ ಲೋಕಾರ್ಪಣೆ, ತ್ಯಾಜ್ಯ ಘಟಕ ವಾಹನಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಕೆಮ್ರಾಲ್ ಗ್ರಾಪಂ ಆವರಣದಲ್ಲಿ ನಡೆಯಿತು.
ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಸ ತ್ಯಾಜ್ಯ ವಿಲೇವಾರಿಗೆ ಗ್ರಾಮಸ್ಥರು ಪಂಚಾಯತ್ ಜೊತೆ ಕೈ ಗೂಡಿಸಿ, ಸ್ವಚ್ಛ ಗ್ರಾಮಕ್ಕೆ ಸಹಕರಿಸಿದರೆ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ. ಪಂ ಮಟ್ಟದಲ್ಲಿ ಅಧಿಕಾರಿಗಳು ಜನರ ಸಮಸ್ಯೆ ಪರಿಹರಿಸಲು ತ್ವರಿತವಾಗಿ ಪ್ರಯತ್ನಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಪಕ್ಷಿಕೆರೆ ಚರ್ಚಿನ ಸಹಾಯಕ ಧರ್ಮ ಗುರು ಫ್ರಾನ್ಸಿಸ್ ಸಂತೋಷ್ ಡಿಸೋಜ, ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಿನ್ನಿಗೋಳಿ ಜಿ ಪಂ ಸದಸ್ಯ ವಿನೋದ್ ಬೊಳ್ಳೂರು, ತಾಪಂ ಸದಸ್ಯರಾದ ಶುಭಲತಾ ಶೆಟ್ಟಿ, ವಜ್ರಾಕ್ಷಿ ಪಿ.ಶೆಟ್ಟಿ,ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕರಾದ ಮಂಜುಳಾ, ಕೆಮ್ರಾಲ್ ಗ್ರಾಪಂ ಮಾಜಿ ಅಧ್ಯಕ್ಷ ನಾಗೇಶ್ ಅಂಚನ್, ಮಂಗಳೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನರೇಂದ್ರ, ಕೆಮ್ರಾಲ್ ಪಂ. ನಿಕಟಪೂರ್ವ ಅಭಿವೃದ್ಧಿ ಅಧಿಕಾರಿ ರಮೇಶ್ ರಾಥೋಡ್, ಕೆಮ್ರಾಲ್ ಪ್ರಾ.ಆ. ಕೇಂದ್ರ ನಿರೀಕ್ಷಕ ಪ್ರದೀಪ್ ಕುಮಾರ್,ತಾಪಂ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್,ಪಂ. ಆಡಳಿತಾಧಿಕಾರಿ ಸಚಿನ್ ಕುಮಾರ್, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಗ್ರಾಮ ಕರಣಿಕ ಸಂತೋಷ್ ಉಪಸ್ಥಿತರಿದ್ದರು.
ಪ್ರದೀಪ್ ಕುಮಾರ್ ವಿಶ್ವ ಕೈ ತೊಳೆಯುವ ದಿನದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಪಕ್ಷಿಕೆರೆಯ ನಿತಿನ್ ವಾಜ್ ತಯಾರಿಸಿದ ಪರಿಸರ ಸ್ನೇಹಿ ಉತ್ಪನ್ನವನ್ನು ಶಾಸಕ ಉಮಾನಾಥ ಕೋಟ್ಯಾನ್ ಬಿಡುಗಡೆಗೊಳಿಸಿದರು. ಕೊರೊನಾ ಯೋಧರಾದ ಕೆಮ್ರಾಲ್ ಗ್ರಾಪಂ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು ಹಾಗೂ ಕೆಮ್ರಾಲ್ ಗ್ರಾಪಂನಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಗೌರವಿಸಲಾಯಿತು. ಕೆಮ್ರಾಲ್ ಗ್ರಾಪಂ. ನಲ್ಲಿ ಆರು ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪಿಡಿಒ ರಮೇಶ್ ರಾಥೋಡ್ ಅವರಿಗೆ ಬೀಳ್ಕೊಡುಗೆ ನಡೆಯಿತು. ಗ್ರಾಪಂ ಆಡಳಿತಾಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿದರು. ಅರ್ಪಿತಾ ಶೆಟ್ಟಿ ನಿರೂಪಿಸಿದರು. ಅರುಣ್ ಪ್ರದೀಪ್ ಡಿಸೋಜ ವಂದಿಸಿದರು.
Kshetra Samachara
16/10/2020 02:54 pm