ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಆನ್‌ಲೈನ್ ಮೂಲಕ ಹಣದ ವಂಚನೆ ಆದ ತಕ್ಷಣ ದೂರು ನೀಡಿ: ಉಡುಪಿ ಎಸ್ಪಿ

ಉಡುಪಿ: ಜಿಲ್ಲೆಯಲ್ಲಿ ಆನ್‌ಲೈನ್ ಮೂಲಕ ಹಣ ಅಕ್ರಮ, ಮೋಸದ ಮೂಲಕ ಹಣ ವರ್ಗಾವಣೆ ಪ್ರಕರಣಗಳು ಹೆಚ್ಚುತ್ತಿದ್ದು ಮೋಸ ಹೋದವರು ತಡ ಮಾಡದೆ ತಕ್ಷಣ ದೂರು ನೀಡಿದರೆ ಟ್ರೇಸ್ ಮಾಡಲು ಅನುಕೂಲ ಆಗುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಹೇಳಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು, ಆನ್ ಲೈನ್ ಮೂಲಕ ಹಣದ ವಂಚನೆಯಾದರೆ ದೂರು ನೀಡಲು ತಡ ಮಾಡಬಾರದು.ತಡ ಮಾಡಿದರೆ ಇನ್ನಷ್ಡು ಹಣ ಕಳೆದುಕೊಳ್ಳಬೇಕಾಗಬಹುದು. ಅಲ್ಲದೆ, ವಂಚಕರು ಬೇರೆ ಬೇರೆ ಅಕೌಂಟ್ ಗಳಿಗೆ ಹಣವನ್ನು ಟ್ರಾನ್ಸ್ ಫರ್ ಮಾಡುತ್ತಾ ಹೋಗುತ್ತಾರೆ.ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರೆ ವಂಚಕರ ಅಕೌಂಟ್ ಫ್ರೀಝ್ ಮಾಡಲು ಸಾಧ್ಯವಿದೆ.ಅಲ್ಲದೆ ಕಳೆದುಕೊಂಡ ಹಣವನ್ನು ವಾಪಾಸು ಮಾಡಲು ಅನುಕೂಲವಾಗುತ್ತದೆ.ದೂರು ನೀಡಲು ಹಿಂಜರಿಕೆ ಮಾಡಿದರೆ ,ನಾಚಿಕೆ ಮಾಡಿದರೆ ಹೆಚ್ಚಿನ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಪಡುಬಿದ್ರೆಯಲ್ಲಿ ವ್ಯಕ್ತಿಯೊಬ್ವರು 28 ಲಕ್ಷ ಕಳೆದುಕೊಂಡಿದ್ದರು. ನಾವು ಎಫ್‌ಐಅರ್ ಮಾಡಿ ಹಂತಹಂತವಾಗಿ ಹಣ ವಾಪಾಸು ಮಾಡುವ ಕೆಲಸ ಮಾಡಿದೆವು. ಹಾಗಾಗಿ ಜನರು ಪೊಲೀಸರಿಗೆ ಆದಷ್ಟು ಬೇಗ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

16/09/2022 03:45 pm

Cinque Terre

14.87 K

Cinque Terre

2

ಸಂಬಂಧಿತ ಸುದ್ದಿ