ಪುತ್ತೂರು: ಕ್ಲಬ್ ಹೌಸ್‌ನಲ್ಲಿ ಶ್ರೀರಾಮ ದೇವರ ನಿಂದನೆ ಮಾಡಿದ್ದಾರೆ ಎಂದು ಪ್ರಚಾರಗೊಂಡ ಹಿನ್ನಲೆಯಲ್ಲಿ ಪುತ್ತೂರಿನ ನ್ಯಾಯವಾದಿ, ಕಾಂಗ್ರೆಸ್ ಐಟಿ ಸೆಲ್ ರಾಜ್ಯ ನಾಯಕಿ ಶೈಲಜಾ ಅಮರನಾಥ್ ವಿರುದ್ದ ಪುತ್ತೂರು ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ, ಶೈಲಜಾ ಮನೆಗೆ ದಾಳಿ ನಡೆದಿದ್ದು, ಇದೀಗ ಯುಟ್ಯೂಬ್ ಚಾನೆಲ್ ನಿರೂಪಕಿ ಸುಳ್ಯ ಮೂಲದ ಮುಮ್ತಾಜ್ ವಿರುದ್ಧ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 50/2022 ಕಲಂ 505 ( 2) , 509 ಜೊತೆಗೆ 34 ಐಪಿಸಿ ಅಡಿ ಮಮ್ತಾಜ್ ವಿರುದ್ದ ಜೂ.18ರಂದು ಪ್ರಕರಣ ದಾಖಲಾಗಿದೆ.
ಶೈಲಜಾ ಅಮರನಾಥ ಗೌಡ ಬಪ್ಪಳಿಗೆ ಅವರು ನೀಡಿದ ದೂರಿನಲ್ಲಿ, ಯೂಟ್ಯೂಬ್ ಚಾನೆಲ್‌ನವರು ರಾಮ ದೇವರ ವಿಚಾರದಲ್ಲಿ ಎಡಿಟ್ ಆಡಿಯೋ ಮತ್ತು ವಿಡಿಯೋ ಮಾಡಿ ನನ್ನ ಪೋನ್ ನಂಬರ್ ಹಾಗೂ ಭಾವಚಿತ್ರವನ್ನು ಬಳಸಿ ತಪ್ಪು ಸಂದೇಶವನ್ನು ಜೂ. 17 ರಂದು ರವಾನೆ ಮಾಡಿದ್ದು ಈ ಕಾರಣದಿಂದ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿದೆ ಎಂದು ಶೈಲಜಾ ದೂರು ನೀಡಿದ್ದಾರೆ.
ಜೂ.18ರಂದು ಸಂಜೆ 4:30 ಗಂಟೆ ದೂರುದಾರೆಯ ಮನೆಗೆ ಕಲ್ಲು ಬಿಸಾಡಿ ಕಿಟಕಿ ಗಾಜು ಪುಡಿ ಮಾಡಿ ಮಡ್ ಆಯಿಲ್ ಚೆಲ್ಲಿ ಫಿರ್ಯಾದಿದಾರರ ಕಚೇರಿಯ ಮೇಲೆ ಫಿರ್ಯಾದಿದಾರರ ಶ್ರದ್ಧಾಂಜಲಿ ಫೋಟೋವನ್ನು ಅಂಟಿಸಿದ್ದಾರೆ ದೂರಿನಲ್ಲಿ ತಿಳಿಸಲಾಗಿದೆ. ಈ ಕೃತ್ಯಕ್ಕೆ ಯೂಟ್ಯೂಬ್ ಚಾನಲ್‌ನ ನಿರೂಪಕಿ ಎಂ.ಎಸ್ ಮುಮ್ತಾಸ್ ಆಗಿದ್ದು ಆಕೆಯ ಮೇಲೆ ಹಾಗೂ ಆ ಚಾನಲ್‌ನ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.
Kshetra Samachara
19/06/2022 02:43 pm