ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಸಹೋದರರ ನಡುವೆ ಗಲಾಟೆ: ಅಣ್ಣನಿಂದ ತಮ್ಮನ ಬರ್ಬರ ಹತ್ಯೆ

ವಿಟ್ಲ: ಸಹೋದರರ ನಡುವೆ ಗಲಾಟೆ ನಡೆದು ಅಣ್ಣನೇ ತಮ್ಮನ್ನನ್ನು ಕೊಲೆಗೈದ ಘಟನೆ ವಿಟ್ಲದ ಶಿರಂಕಲ್ಲು ನಂದೆರೆಬೆಟ್ಟು ಎಂಬಲ್ಲಿ ನಡೆದಿದೆ. ಮೃತರನ್ನು ಬಾಲಪ್ಪ ನಾಯ್ಕ್ ಎಂದು ಗುರುತಿಸಲಾಗಿದೆ. ಐತಪ್ಪ ನಾಯ್ಕ್ ಎಂಬಾತನೇ ಕೊಲೆ ಆರೋಪಿ

ಬಾಲಪ್ಪ ನಾಯ್ಕ್ ಮತ್ತು ಐತಪ್ಪ ನಾಯ್ಕ್ ಇಬ್ಬರು ಸಹೋದರರಾಗಿದ್ದು, ಕೆಲ ದಿನಗಳಿಂದ ಇವರಿಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇಂದು ಹೊಸ ಮನೆಯಲ್ಲಿ ಗೊಂದೋಳು ಪೂಜೆ ನಡೆಯುತ್ತಿದ್ದು, ಈ ವೇಳೆ ಸಹೋದರರಿಬ್ಬರೂ ಹಳೆ ಮನೆಯಲ್ಲಿ ಜಗಳವಾಡಿದ್ದು, ಜಗಳ ತಾರಕ್ಕಕ್ಕೇರಿ ಅಣ್ಣ ತಮ್ಮನ್ನನ್ನೇ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Edited By :
Kshetra Samachara

Kshetra Samachara

11/05/2022 12:04 pm

Cinque Terre

16.58 K

Cinque Terre

0