ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಧ್ಯರಾತ್ರಿ ತಂಡಗಳ ಮಧ್ಯೆ ಮಾರಾಮಾರಿ; ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿದರು!; 7 ಮಂದಿ ಸೆರೆ

ಮಂಗಳೂರು: ನಗರದ ಬಳ್ಳಾಲ್ ಬಾಗ್ ನಲ್ಲಿನ ಸಾಯಿ ನೆಸ್ಟ್ ಸರ್ವೀಸ್ ಅಪಾರ್ಟ್ ಮೆಂಟ್ ಮುಂಭಾಗ ನಿನ್ನೆ ಮಧ್ಯರಾತ್ರಿ 11.45ಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಬಿಡಿಸಲು ಹೋದ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿ, ವಾಕಿಟಾಕಿ ಕಿತ್ತೆಸೆದ ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಧೀರಜ್ ಶೆಟ್ಟಿ, ರಕ್ಷಿತ್ ಕೆ., ರೋಹಿತ್ ಶೆಟ್ಟಿ, ಹರ್ಷಿತ್, ಕೀರ್ತಿರಾಜ್, ವಿವೇಕ್, ರಾಹುಲ್ ಬಂಧಿತರು.

ನಿನ್ನೆ ಮಧ್ಯರಾತ್ರಿ 11.45ರ ಸುಮಾರಿಗೆ 2 ಗುಂಪುಗಳ ಮಧ್ಯೆ ಹೊಡೆದಾಟ ನಡೆದಿತ್ತು. ಅಲ್ಲದೆ ಕಲ್ಲು, ಪೈಪ್, ವಿಕೆಟ್ ಹಿಡಿದು ವಾಹನ ಜಖಂಗೊಳಿಸುತ್ತಿತ್ತು. ತಕ್ಷಣ ಸ್ಥಳಕ್ಕೆ ಬರ್ಕೆ ಠಾಣೆ ಮಹಿಳಾ ಅಧಿಕಾರಿ ಧಾವಿಸಿದ್ದು, ತಂಡವನ್ನು ಸಮಾಧಾನ ಮಾಡಲೆತ್ನಿಸಿದ್ದಾರೆ. ಈ ಸಂದರ್ಭ ಧೀರಜ್ ಎಂಬಾತ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿ, ಕೈಯ್ಯಲ್ಲಿದ್ದ ವಾಕಿಟಾಕಿ ಕಿತ್ತು ನೆಲಕ್ಕೆ ಬಡಿದಿದ್ದಾನೆ. ಜೊತೆಗೆ ಉಳಿದ ಆರೋಪಿಗಳೂ ಮುಂದೆ ಹೋಗದಂತೆ ತಡೆದಿದ್ದಾರೆ ಎಂದು ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ ಹೆಚ್ಚಿನ ಪೊಲೀಸರು ಬರುತ್ತಿದ್ದಂತೆ ಕೆಲ ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳದಲ್ಲಿದ್ದ 7 ಆರೋಪಿಗಳನ್ನು ಬಂಧಿಸಿದ್ದಾರೆ. ಮಾರಾಮಾರಿ ಯಾಕೆ ನಡೆದಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ‌.‌ ಒಂದು ಚತುಷ್ಚಕ್ರ ವಾಹನ ಸೇರಿ, ಆರು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಬರ್ಕೆ ಠಾಣೆಯಲ್ಲಿ ಸುಮೋಟೊ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Edited By : Manjunath H D
Kshetra Samachara

Kshetra Samachara

31/10/2021 02:15 pm

Cinque Terre

17.77 K

Cinque Terre

0