ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಜಾಲ ಭೇದಿಸಿದ ಮಂಗಳೂರು ಪೊಲೀಸರು..

ಮಂಗಳೂರು: ಫೇಸ್ ಬುಕ್ ಮುಖಾಂತರ ಪರಿಚಯ ಮಾಡಿಕೊಂಡು ನಂತರ ಮನೆಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಜಾಲವೊಂದನ್ನು ಮಂಗಳೂರಿನ ಸುರತ್ಕಲ್ ಪೋಲಿಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಕೃಷ್ಣಾಪುರ 6ನೇ ಬ್ಲಾಕ್ ಪರಿಸರದ ಮಠ ರಸ್ತೆಯ ಸಮೀಪದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ತನ್ನ ವ್ಯವಹಾರಕ್ಕಾಗಿ ವಾಸ್ತವ್ಯ ಹೂಡಿದ ಆರೋಪಿಗಳ ಪೈಕಿ ಆರೋಪಿ ರೇಶ್ಮಾ ಮತ್ತು ಆರೋಪಿ ಜೀನತ್ ಮುಬೀನ ಎಂಬುವವರು ಜನರನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿಕೊಂಡು ಅವರ ಸ್ನೇಹ ಬೆಳೆಸಿ ಬಳಿಕ ಅವರನ್ನು ಒಬ್ಬಂಟಿಯಾಗಿರುವುದಾಗಿ ನಂಬಿಸಿ ಮನೆಗೆ ಆಹ್ವಾನಿಸುತ್ತಿದ್ದರು.

ಹಾಗೇ ಮನೆಗೆ ಬಂದವರನ್ನು ಇಕ್ಬಾಲ್ ಮಹಮ್ಮದ್ ಮತ್ತು ನಾಸಿಫ್ ಎಂಬುವವರ ಸಹಾಯದಿಂದ ಬೆದರಿಸಿ ಹಲ್ಲೆ ನಡೆಸಿ ಬ್ಲಾಕ್ ಮೇಲ್ ಮಾಡಿ ಅವರಿಂದ ಹಣ ವಸೂಲಿ ಮಾಡುತಿದ್ದರು. ಈ ವ್ಯವಸ್ಥಿತ ಜಾಲವೊಂದನ್ನು ಸುರತ್ಕಲ್ ಪೋಲಿಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರಿಂದ ಮೊಬೈಲ್, ನಗದು ಹಣ, ಕೃತ್ಯಕ್ಕೆ ಉಪಯೋಗಿಸಿದ ಆಯುಧ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

18/01/2021 01:55 pm

Cinque Terre

38.57 K

Cinque Terre

27