ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ದಾರಿಯಲ್ಲಿ ಸಿಕ್ಕಿದ 40 ಪವನ್ ಚಿನ್ನದ ಬ್ಯಾಗ್‌ ಮರಳಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ!

ಕಾಪು: ದಾರಿಯಲ್ಲಿ ಬಿದ್ದು ಸಿಕ್ಕಿದ 40 ಪವನ್ ಚಿನ್ನವಿದ್ದ ಬ್ಯಾಗ್‌ಅನ್ನು ವಾರಸುದಾರರಿಗೆ ತಿಂದಿರುಗಿಸಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ‌ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಚೊಕ್ಕಾಡಿಯಲ್ಲಿ ನಡೆದಿದೆ.

ಶಂಕರಪುರದ ಕೆನ್ಯೂಟ್ ಮೋನಿಸ್ ಅವರಿಗೆ, ಕಟಪಾಡಿ ಶಿರ್ವ ನಡುವಿನ ಚೊಕ್ಕಾಡಿಯ ರೈಲ್ವೆ ಸೇತುವೆ ಬಳಿ ತೆರಳುತ್ತಿದ್ದಾಗ ಬ್ಯಾಗ್‌ ಒಂದು ಬಿದ್ದಿರುವುದು ಗಮನಕ್ಕೆ ಬಂತು. ಬ್ಯಾಗ್ ತೆಗೆದು ನೋಡಿದಾಗ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಬಳಿಕ ಅವರು ಬ್ಯಾಗ್‌ನ್ನು ಕಟಪಾಡಿ ಹೊರ ಠಾಣೆಗೆ ನೀಡಿದ್ದಾರೆ. ಇದೇ ವೇಳೆ ಚಿನ್ನಾಭರಣ ಕಳೆದುಕೊಂಡಿದ್ದ ಅನ್ಸಿರಾ ಬಾನು ಕಟಪಾಡಿ ಪೇಟೆಯಲ್ಲಿ ರಿಕ್ಷಾ ಚಾಲಕರ ಜೊತೆಗೆ ಬ್ಯಾಗ್ ಕಳೆದುಕೊಂಡ ಬಗ್ಗೆ ವಿಚಾರಿಸುತ್ತಿದ್ದರು. ರಿಕ್ಷಾ ಚಾಲಕರು ನೀಡಿದ ಮಾಹಿತಿಯಂತೆ ಠಾಣೆಗೆ ಹೋಗಿ ಬ್ಯಾಗ್ ಕಳೆದುಕೊಂಡ ಮಹಿಳೆ ಪೊಲೀಸರಿಗೆ ತಿಳಿಸಿದರು. ಮಹಿಳೆ ನೀಡಿದ ಮಾಹಿತಿ ಹಾಗೂ ಬ್ಯಾಗ್ ನಲ್ಲಿದ್ದ ವಸ್ತುಗಳು ಪರಸ್ಪರ ತಾಳೆಯಾಗಿದ್ದು, ಪೊಲೀಸರು ಬ್ಯಾಗ್ಅನ್ನು ಆ ಮಹಿಳೆಗೆ ನೀಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

13/06/2022 01:59 pm

Cinque Terre

7.95 K

Cinque Terre

0