ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸುನ್ನೀ ಮುಖಂಡರ ಹತ್ಯಾ ಯತ್ನ; ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಕ್ರೋಶ

ಮಂಗಳೂರು: ಇತ್ತೀಚೆಗೆ ಉದ್ಯಮಿ, ಸುನ್ನೀ ಮುಖಂಡ ವೆನ್ಜ್ ಅಬ್ದುಲ್ ಅಝೀಝ್ ಹಾಗೂ ಅವರ ಅಳಿಯ ನೌಶಾದ್ ಮೇಲೆ ನಡೆದ ಕೊಲೆ‌ ಯತ್ನ ಪ್ರಕರಣ ಖಂಡಿಸಿ ನಗರದ ಕ್ಲಾಕ್ ಟವರ್ ಬಳಿ ಮುಸ್ಲಿಂ ಸಂಘಟನೆಗಳ ಒಕ್ಕೂಟ ಕೈಕಂಬ ವತಿಯಿಂದ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಎಸ್ಎಸ್ಎಫ್ ಮಾಜಿ ಕಾರ್ಯದರ್ಶಿ ಯಾಕೂಬ್ ಸಅದಿ ನಾವೂರು ಮಾತನಾಡಿ, ನಗರದ ಎರಡು ಕಡೆ ನಡೆದ ಘಟನೆಯೂ ಸಿಸಿ ಟಿವಿಯಲ್ಲಿ ದಾಖಲಾದರೂ ಪೊಲೀಸರು ಆರೋಪಿಗಳ ಬಂಧನಕ್ಕೆ ಮೀನಮೇಷ ಎಣಿಸುತ್ತಿದ್ದಾರೆ‌. ನಗರ ಪೊಲೀಸರ ಬಗ್ಗೆ ನಮಗೆ ವಿಶ್ವಾಸವಿದೆ‌‌‌. ಆ ಕಾರಣಕ್ಕಾಗಿ ಇಂದು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಸಂಬಂಧಿಸಿದ ಠಾಣೆಗೆ ಮುತ್ತಿಗೆ ಹಾಕಲು ಸಿದ್ಧರಿದ್ದೇವೆ ಎಂದರು. SYS ಪಶ್ಚಿಮ ವಲಯ ಪ್ರಧಾನ ಕಾರ್ಯದರ್ಶಿ ಖಲೀಲ್ ಮುಸ್ಲಿಯಾರ್, SYS ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ, SYS ರಾಜ್ಯ ನಾಯಕರಾದ ಜಿಎಂ ಉಸ್ತಾದ್, ಕಂದಾವರ ಮಸೀದಿ ಅಧ್ಯಕ್ಷ ಬಶೀರ್ ಮೇಘಾ, ಕರ್ನಾಟಕ ಮುಸ್ಲಿಂ‌ ಜಮಾಅತ್ ಕಾರ್ಯದರ್ಶಿ ಅಬ್ದುಲ್ ಹಮೀದ್, SSF ಜಿಲ್ಲಾ ಕೋಶಾಧಿಕಾರಿ ಮೊಹಮ್ಮದ್ ಅಲಿ, ಮುನೀರ್ ಸಖಾಫಿ, ಮುಸ್ಲಿಂ‌ ಸಂಘಟನೆ ಒಕ್ಕೂಟ ಸಂಚಾಲಕ ರಿಯಾಝ್ ಮತ್ತಿತರರು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಪೊಲೀಸರ ವಿಳಂಬ ನೀತಿ ವಿರುದ್ಧ ಘೋಷಣೆ ಕೂಗಿದರು.

Edited By : Manjunath H D
Kshetra Samachara

Kshetra Samachara

11/12/2020 04:44 pm

Cinque Terre

20.17 K

Cinque Terre

0