ನಗರದ ಪುರಭವನದಲ್ಲಿ ನಡೆಯುವ ಸಿಎಫ್ ಐ ಗರ್ಲ್ಸ್ ಕಾನ್ಫರೆನ್ಸ್ ಕಾರ್ಯಕ್ರಮಕ್ಕಿಂತ ಮೊದಲು ಪೊಲೀಸ್ ಅನುಮತಿಯಿಲ್ಲದೆ ಮೆರವಣಿಗೆಗೆ ಯತ್ನಿಸಿದ ಸಿಎಫ್‌ಐ ಮಹಿಳಾ ಕಾರ್ಯಕರ್ತರನ್ನು ಪೊಲೀಸರು ತಡೆದ ಘಟನೆ ನಡೆದಿದೆ.
ನಗರದ ಮಿಲಾಗ್ರಿಸ್ ಪಕ್ಕದ ಮಸೀದಿ ಬಳಿ ಸುಮಾರು 500ರಷ್ಟು ಕಾರ್ಯಕರ್ತೆಯರು ಜಮಾಯಿಸಿದ್ದರು. ಸ್ಥಳಕ್ಕೆ ಮಂಗಳೂರು ನಗರ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಅಂಶು ಕುಮಾರ್ ಭೇಟಿ ನೀಡಿದ್ದಾರೆ. ಅಲ್ಲದೆ ಮೆರವಣಿಗೆ ಮಾಡಲು ಅವಕಾಶ ನೀಡದೆ ಬಸ್ ನಲ್ಲಿ ಪುರಭವನಕ್ಕೆ ಕಳುಹಿಸಲಾಯಿತು. ಮೆರವಣಿಗೆ ಮಾಡಿದರೆ ಪೊಲೀಸ್ ಕಮಿಷನರ್ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಕಮಿಷನರ್ ಎಚ್ಚರಿಕೆ ನೀಡಿದ ತಕ್ಷಣ ಮೆರವಣಿಗೆ ಮಾಡದೆ ನಾಲ್ಕಾರು ಬಸ್ ಗಳ ಮೂಲಕ ಪುರಭವನದತ್ತ ತೆರಳಿ ಕಾರ್ಯಕರ್ತೆಯರು ಸ್ಥಳ ಖಾಲಿ ಮಾಡಿದರು. ಅಲ್ಲದೆ, ಸಮಾವೇಶದಲ್ಲಿ ಅಪ್ರಾಪ್ತ ಮಕ್ಕಳನ್ನು ಬಳಸಿದ್ದೂ ಗಮನಕ್ಕೆ ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಮಕ್ಕಳು ಪೋಷಕರೊಂದಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.
PublicNext
16/07/2022 04:30 pm