ಉಡುಪಿ: ಉಡುಪಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರ ಸೇತುವೆಯಲ್ಲಿ ಸ್ಕೂಟಿಗೆ ಟ್ಯಾಂಕರ್ ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಸಹ ಸವಾರ ಪಾರಾದ ಘಟನೆ ಸಂಭವಿಸಿದೆ.
ಮಲ್ಲಾರು ನಿವಾಸಿ ಅಲ್ಫಾಝ್ ಮೃತ ಸವಾರ.ಇವರು ಕಾಪುವಿನಿಂದ ಉಡುಪಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಉದ್ಯಾವರ ಸೇತುವೆಯಲ್ಲಿ ಟ್ಯಾಂಕರೊಂದು ಸ್ಕೂಟಿಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರ ಹೆದ್ದಾರಿಗೆ ಬಿದ್ದಿದ್ದು, ಟ್ಯಾಂಕರಿನ ಚಕ್ರವು ಸವಾರನ ತಲೆಯ ಮೇಲೆ ಹರಿದಿದೆ.
ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
10/08/2022 08:06 pm