ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಪಾವಂಜೆ ಸೇತುವೆ ಬಳಿ ಯುವಕ ನಾಪತ್ತೆ ಪ್ರಕರಣ: ಮುಂದುವರಿದ ಶೋಧ ಕಾರ್ಯ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಸೇತುವೆ ಬಳಿ ಸ್ಕೂಟರ್ ಬಿಟ್ಟು ನಾಪತ್ತೆಯಾದ ಮಂಡ್ಯ ಮದ್ದೂರು ತೂಬಿನಕೆರೆ ನಿವಾಸಿ ರಾಕೇಶ್ ಗೌಡ (26) ಎಂಬಾತನಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ

ಬೆಳಗ್ಗಿನಿಂದ ಅಗ್ನಿಶಾಮಕ ದಳ, ಎಸ್ ಡಿ ಆರ್ ಎಫ್ ಪಡೆ ಪಾವಂಜೆ ಸೇತುವೆಯ ಕೆಳಗಿನ ಭಾಗದ ನಂದಿನಿ ನದಿಯಿಂದ ಸಸಿಹಿತ್ಲುವರೆಗೆ ದೋಣಿ ಮೂಲಕ ಪತ್ತೆ ಕಾರ್ಯ ನಡೆಸಿದ್ದಾರೆ.

ನಾಪತ್ತೆಯಾದ ಯುವಕ ರಾಕೇಶ್ ಗೌಡ ಕಳೆದ ಆರು ತಿಂಗಳ ಹಿಂದೆ ಮಂಗಳೂರಿನಲ್ಲಿ ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ್ದು ನಗರದ ಪಿಜಿಯಲ್ಲಿ ಉಳಿದುಕೊಂಡಿದ್ದರು. ಮಂಗಳವಾರ ರಾತ್ರಿ ಮಿತ್ರನಿಗೆ ಮೊಬೈಲ್ ಮುಖಾಂತರ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ರಾತ್ರಿ 9:30 ರಿಂದ 10:30 ರವರೆಗೆ ಪಾವಂಜೆ ಸೇತುವೆ ಬಳಿ ನಿಂತಿದ್ದನ್ನು ಪಂಚಾಯತ್ ಸದಸ್ಯ ಸುಕೇಶ್ ಗಮನಿಸಿದ್ದಾರೆ.

ಬಳಿಕ ಸೇತುವೆ ಬಳಿ ಸ್ಕೂಟರ್ ಮಾತ್ರ ಪತ್ತೆಯಾಗಿದ್ದು ರಾಕೇಶ್ ಗೌಡ ನಾಪತ್ತೆಯಾಗಿದ್ದಾನೆ. ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

13/07/2022 02:29 pm

Cinque Terre

15.02 K

Cinque Terre

0

ಸಂಬಂಧಿತ ಸುದ್ದಿ