ಮಂಗಳೂರು: ಅಂತಾರಾಷ್ಟ್ರೀಯ ಜ್ಯುವೆಲ್ಲರಿ ಬ್ರ್ಯಾಂಡ್ ಕೇವಾಬಾಕ್ಸ್ ನ ಹೊಚ್ಚಹೊಸ ಒಡವೆಗಳು ಮಂಗಳೂರಿನಲ್ಲಿ ಅನಾವರಣಗೊಳ್ಳಲಿದೆ. 'ಸಾಂಸ್ಕೃತಿಕ ಅನನ್ಯತೆ: ನಮಸ್ತೇ ಇಂಡಿಯಾ' ಕಾರ್ಯಕ್ರಮದಡಿಯಲ್ಲಿ ಅಕ್ಟೋಬರ್ 2ರಂದು ಮಂಗಳೂರಿನ ಫಿಝಾ ಬೈ ನೆಕ್ಸಸ್ ಮಾಲ್ ನಲ್ಲಿ ಕೇವಾ ಬಾಕ್ಸ್ ತನ್ನ ಜ್ಯುವೆಲ್ಲರಿಗಳನ್ನು ಸಾಂಸ್ಕೃತಿಕ ಪ್ರಭಾವದ ಪ್ರಾಮುಖ್ಯತೆಗಳನ್ನು ಮೊಟ್ಟಮೊದಲ ಬಾರಿಗೆ ಮಂಗಳೂರಿನಲ್ಲಿ ಬಿಡುಗಡೆ ಮಾಡಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೇವಾಬಾಕ್ಸ್ ಫೌಂಡರ್ ಸಿಇಒ ಮೊಹಮ್ಮದ್ ಇರ್ಷಾದ್ ಮಾತನಾಡಿ, ಈ ಕಾರ್ಯಕ್ರಮವನ್ನು ಬಾಲಿವುಡ್ ಸೆಲೆಬ್ರಿಟಿ ಡೈಸಿ ಶಾ ಅನಾವರಣಗೊಳಿಸಲಿದ್ದಾರೆ. ಭಾರತದ ಪ್ರಸಿದ್ಧ ಸಾಂಸ್ಕೃತಿಕ ತಂಡ ಹರಿ ಮತ್ತು ಚೇತನಾ ಅವರ ಕಾರ್ಯಕ್ರಮ ಇರಲಿದೆ. ಅಲ್ಲದೆ ರ್ಯಾಂಪ್ ವಾಕ್ ಇದ್ದು, ಇದನ್ನು ಫ್ಯಾಶನ್ ಇಂಡಸ್ಟ್ರಿಯ ಖ್ಯಾತನಾಮರು ಜಡ್ಜ್ ಮಾಡಲಿದ್ದಾರೆ ಎಂದು ಹೇಳಿದರು.
ಕೇವಾಬಾಕ್ಸ್ ಜ್ಯುವೆಲ್ಲರಿಗಳು ಭಾರತ, ಇಟಲಿ ಹಾಗೂ ಟರ್ಕಿಯ ಹಗುರ ಶೈಲಿಯ ಮಾದರಿಗಳ ಸಮ್ಮಿಲನವಾಗಿದೆ. ಕೇವಾಬಾಕ್ಸ್ ತನ್ನ ಶಾಖೆಗಳನ್ನು ದುಬೈ, ಬೆಂಗಳೂರು ಹಾಗೂ ಇನ್ನಿತರ ನಗರಗಳಿಗೆ ವಿಸ್ತರಿಸಲಿದೆ. ಈ ಮೂಲಕ ಭಾರತದಲ್ಲಿಯೇ 50 ಶಾಖೆಗಳನ್ನು ತೆರೆಯುವ ಚಿಂತನೆಯಿದೆ ಎಂದರು.
PublicNext
22/09/2022 09:29 pm