ಉಡುಪಿ : ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಸತತ 5ನೇ ದಿನವೂ ಶಂಕರಪುರ ಮಲ್ಲಿಗೆಗೆ ಗರಿಷ್ಠ ದರ ಲಭಿಸಿದೆ.
ಹೌದು ! ಕರಾವಳಿ ಮಾತ್ರವಲ್ಲದೆ ವಿದೇಶದಲ್ಲೂ ಪ್ರಸಿದ್ಧಿ ಪಡೆದಿರುವ ಶಂಕರಪುರ ಮಲ್ಲಿಗೆಗೆ ಶುಕ್ರವಾರ ಕಟ್ಟೆಯಲ್ಲಿ ಅಟ್ಟೆಗೆ 2100 ರೂಪಾಯಿ ನಿಗದಿಯಾಗಿತ್ತು. ಮಾರುಕಟ್ಟೆಯಲ್ಲಿ 2250 ರೂಪಾಯಿಗೆ ಮಾರಾಟವಾಗಿದೆ. ಭಟ್ಕಳ ಮಲ್ಲಿಗೆ ದರ ಯಥಾಸ್ಥಿತಿಯಲ್ಲಿದ್ದು, ಕಟ್ಟೆಯಲ್ಲಿ 1530 ರೂಪಾಯಿ ಲಭಿಸಿದೆ. ಮಾರುಕಟ್ಟೆಯಲ್ಲಿ 1630 ರೂಪಾಯಿಗೆ ಮಾರಾಟವಾಗಿದೆ.
ತಿಂಗಳ ಹಿಂದಷ್ಟೇ ಶಂಕರಪುರ ಮಲ್ಲಿಗೆ ದರವು ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಹಬ್ಬದ ಹಿನ್ನೆಲೆಯಲ್ಲಿ ಮಲ್ಲಿಗೆಗೆ ಬೇಡಿಕೆ ವಿಪರೀತ ಹೆಚ್ಚಿದ್ದೇ ದರ ಏರಲು ಪ್ರಮುಖ ಕಾರಣವಾಗಿದ್ದು ಮಲ್ಲಿಗೆ ಬೆಳೆಗಾರರ ಮುಖದಲ್ಲಿ ಸಂತಸ ಹೆಚ್ಚಾಗಿದೆ.
Kshetra Samachara
03/09/2022 06:00 pm