ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಾಜ್ಯಾದ್ಯಂತ ಮದ್ಯ ಮಾರಾಟ ಸ್ಥಗಿತ ಆಗಲಿದೆಯೇ?

ಉಡುಪಿ: ಕೋವಿಡ್ ಲಾಕ್ಡೌನ್ ಬಳಿಕ ಮತ್ತೊಮ್ಮೆ ಮದ್ಯ ಮಾರಾಟ ಸ್ಥಗಿತಗೊಳಿಸುವ ಎಚ್ಚರಿಕೆ ಕೇಳಿ ಬಂದಿದೆ. ಈ ಬಾರಿ ಎಚ್ಚರಿಕೆ ಕೊಟ್ಟಿರುವುದು ಸರ್ಕಾರ ಅಲ್ಲ, ಬದಲಿಗೆ ಮದ್ಯ ಮಾರಾಟಗಾರರೇ ವ್ಯವಹಾರ ಸ್ಥಗಿತ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸರಕಾರ ಹೊಸದಾಗಿ ಆರಂಭ ಮಾಡಿರುವ ಈ- ಇಂಡೆಂಟ್ ವ್ಯವಸ್ಥೆಯಿಂದ ಮತ್ತೆ ಮಾರಾಟಗಾರರು ನಷ್ಟ ಅನುಭವಿಸುತ್ತಿದ್ದಾರೆ.

ಈ ಮೊದಲು ಮಾರಾಟಗಾರರು ಮದ್ಯ ಸರಬರಾಜು ಪಡೆಯುವುದು ಸುಲಭವಾಗಿತ್ತು. ನೇರವಾಗಿ ಹೋಗಿ ಮಧ್ಯ ಖರೀದಿಸಿ ಗ್ರಾಹಕರಿಗೆ ನೀಡಬಹುದಿತ್ತು. ಆದರೆ ಈಗ ಆನ್ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಎಪ್ರಿಲ್ 4 ರಿಂದ ಜಾರಿಯಾಗಿರುವ ವಿನೂತನ ವ್ಯವಸ್ಥೆಗೆ ಮದ್ಯ ಮಾರಾಟಗಾರರು ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. 2011 ನೇ ಇಸವಿಯಿಂದ ಮದ್ಯ ಖರೀದಿಗೆ ಬೇರೆಯದೇ ತಂತ್ರಜ್ಞಾನ ಇತ್ತು. ಹಳೆಯ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಎಪ್ರಿಲ್ ನಾಲ್ಕರಿಂದ ಹೊಸ ಪದ್ಧತಿ ಜಾರಿಯಾಗಿದೆ. ಈ ಪದ್ಧತಿಯ ಅನುಸಾರ ವೆಬ್ ಸೈಟಿಗೆ ಹೋಗಿ ಬೇಕಾದ ಮದ್ಯಗಳ ವಿವರವನ್ನು ಅಪ್ಲೋಡ್ ಮಾಡಬೇಕು. ಅದರಲ್ಲೂ ರಾತ್ರಿ 9 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಮಾತ್ರ ಅಪ್ಲೋಡ್ ಮಾಡಲು ಅವಕಾಶ. ಇದೇ ಸಂದರ್ಭದಲ್ಲಿ ಸರ್ವರ್ ಕೈಕೊಟ್ಟರೆ ಕೇಳುವುದೇ ಬೇಡ.

ಗ್ರಾಹಕರ ಬೇಡಿಕೆಯ ಮದ್ಯಗಳನ್ನು ಪಡೆಯಲು ಸನ್ನದುದಾರರಿಗೆ ಸಾಧ್ಯವಾಗುತ್ತಿಲ್ಲ. ನೂತನ ವ್ಯವಸ್ಥೆಯಲ್ಲಿ ಅನೇಕ ಲೋಪದೋಷಗಳಿದ್ದು, ಈ ಬಗ್ಗೆ ಇಲಾಖೆಯ ಮುಂದೆ ಕೇಳಿಕೊಂಡರೂ ಸಮಂಜಸ ಉತ್ತರ ಸಿಕ್ಕಿಲ್ಲ ಎಂದು ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ಆರೋಪಿಸಿದ್ದಾರೆ.

Edited By : Manjunath H D
PublicNext

PublicNext

06/05/2022 02:46 pm

Cinque Terre

45.17 K

Cinque Terre

8