ಹಲಸಿನ ಬೆಳೆ, ಬಳಕೆ ಮತ್ತು ಮೌಲ್ಯವರ್ಧನೆಗೆ ಪ್ರೋತ್ಸಾಹ ನೀಡುವ ಆಶಯದಿಂದ ಪುತ್ತೂರಿನಲ್ಲಿ ಎರಡು ದಿನಗಳ ಹಲಸು ಮೇಳ ನಡೆಯಲಿದೆ.
2022 ಜೂನ್ 25 ಮತ್ತು 26ರಂದು ನವತೇಜ ಪುತ್ತೂರು ಮತ್ತು ಜೆಸಿಐ ಪುತ್ತೂರು ಸಂಸ್ಥೆಗಳು ಜಂಟಿಯಾಗಿ ಮೇಳವನ್ನು ಸಂಘಟಿಸಿದೆ.
ಈ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುತ್ತೂರು ಜೆಸಿಐ ಅಧ್ಯಕ್ಷ ಜೇಸಿ ಶಶಿರಾಜ್ ರೈ ಮತ್ತು ನವತೇಜ ಪುತ್ತೂರು ಸುಹಾಸ್ ಎಪಿಎಸ್ ಮರಿಕೆ ದಿನಪೂರ್ತಿ ಪುತ್ತೂರು ಮುಖ್ಯರಸ್ತೆಯಲ್ಲಿರುವ ಸುಕೃತೀಂದ್ರ ಸಭಾಭವನದಲ್ಲಿ ಮೇಳ ನಡೆಯಲಿದೆ.
ಜೂನ್ 25 ಶನಿವಾರ ಮತ್ತೂರು ಶಾಸಕ ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ, ಈಶ್ವರಮಂಗಲದ ಕೃಷಿಕ, ಹಲಸುಪ್ರೇಮಿ ಕಬೈಲು ವೆಂಕಟೇಶ್ವರ ಶರ್ಮರು ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮೇಳಗಳನ್ನು ಉದ್ಘಾಟಿಸಲಿದ್ದಾರೆ. ಮೀಯಪದವಿನ ಕೃಷಿಕ, ಫಲಪ್ರಿಯ ಡಾ.ಚಂದ್ರಶೇಖರ ಚೌಟರು ಮೇಳಕ್ಕೆ ಶುಭಚಾಲನೆ ನೀಡಲಿದ್ದಾರೆ.
ಇನ್ನು ಮೇಳಕ್ಕೆ ತಿಪಟೂರಿನ ಪ್ರಸಿದ್ಧ ಕೆಂಪು ಹಲಸು ಮೇಳಕ್ಕೆ ಬರಲಿದೆ. ಹಾಗೆಯೇ ಹಲಸಿನ ತಳಿಗಳ ವೈವಿಧ್ಯಗಳು ಮೇಳದಲ್ಲಿ ಇರಲಿವೆ. ಮೇಳದಲ್ಲಿ ವಿವಿಧ ಮಳಿಗೆಗಳಿದ್ದು 'ತಿನ್ನಲು ಸಿದ್ಧ' ಖಾದ್ಯಗಳ ಮಳಿಗೆಗಳು ಇವೆ. ಸ್ಥಳದಲ್ಲೇ ತಯಾರಿಸುವ ಬಗೆಬಗೆಯ ಖಾದ್ಯಗಳು ಹಲಸು ಪ್ರಿಯರ ಉದರ ತಣಿಸಲಿದೆ. ಅಲ್ಲದೆ ವಿವಿಧ ಹಣ್ಣುಗಳ ಪ್ರದರ್ಶನ, ಮಾರಾಟವಿದೆ.
ಈ ಹಿಂದೆ ಈ ಸಂಸ್ಥೆಗಳ ಆಶ್ರಯದಲ್ಲಿ ಸಾವಯವ ಮೇಳ, ಹಲಸಿನ ಮೇಳಗಳು ಯಶಸ್ವಿಯಾಗಿ ಜನರ ಒಲವು ಗಳಿಸಿತ್ತು ಎಂದು ಹೇಳಿದರು.
Kshetra Samachara
23/06/2022 01:19 pm