ವರದಿ: ರಹೀಂ ಉಜಿರೆ
ಮಲ್ಪೆ : ಮುಂಗಾರು ಪ್ರವೇಶಕ್ಕೆ ದಿನಗಳಷ್ಟೇ ಬಾಕಿ ಇದೆ. ಚಂಡಮಾರುತದ ಪರಿಣಾಮ ಕಡಲು ಪ್ರಕ್ಷುಬ್ಧಗೊಂಡಿದ್ದು ಕಡಲ ಅಬ್ಬರ ಜೋರಾಗಿದೆ. ರಾಜ್ಯದ ಕರಾವಳಿಯಲ್ಲಿ ಜೋರಾಗಿ ಮಳೆ ಬಂದು, ಗಾಳಿ ಬೀಸುತ್ತಿದೆ.
ಹೀಗಾಗಿ ಉಡುಪಿ ಸಮುದ್ರದಲ್ಲಿ ಇರುವ ವಾಟರ್ ಸ್ಪೋರ್ಟ್ಸ್ ಮುಂದಿನ ಎರಡು ತಿಂಗಳು ಬಂದ್ ಆಗಿದೆ. ಚಂಡಮಾರುತ ಹಿನ್ನೆಲೆ ಮೀನುಗಾರಿಕೆಗೂ ನಿಷೇಧ ಇದ್ದು, ಬಹುತೇಕ ಮೀನುಗಾರರು ಬೋಟ್ಗಳನ್ನು ಬಂದರಿನಲ್ಲಿ ಲಂಗರು ಹಾಕಿದ್ದಾರೆ.
ಇದಲ್ಲದೇ ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗುವುದನ್ನೂ ನಿಷೇಧ ಮಾಡಲಾಗಿದೆ. ಹೀಗಾಗಿ ಮಲ್ಪೆ ಬೀಚ್ ಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು, ಮುಂದಿನ ಎರಡು ತಿಂಗಳ ಕಾಲ ಮಲ್ಪೆ ಬೀಚ್ ಖಾಲಿ ಖಾಲಿಯಾಗಿರಲಿದೆ.
ಇನ್ನು, ಮೇ 31 ರಿಂದ ಜುಲೈ 31 ವರೆಗೂ ಮೀನುಗಾರಿಕೆಗೆ ನಿಷೇಧ ಇದೆ. ಈ ಸಂದರ್ಭದಲ್ಲಿ ಮೀನುಗಳ ಸಂತಾನೋತ್ಪತ್ತಿ ಕಾಲ, ಹೀಗಾಗಿ ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಬಾರದು ಎಂಬ ನಿಯಮ ಇದೆ. ಆದರೆ ಈ ಬಾರಿ ಚಂಡಮಾರುತದ ಪರಿಣಾಮ ಕಡಲು ಪ್ರಕ್ಷುಬ್ಧವಾಗಿದ್ದು ಕಡಲ ಅಲೆಗಳ ಅಬ್ಬರ ಜೋರಾಗಿದೆ. ಹೀಗಾಗಿ ಜಿಲ್ಲಾಡಳಿತ ಕೆಲ ದಿನಗಳ ವರೆಗೆ ಮೀನುಗಾರಿಕೆಗೆ ನಿಷೇಧ ಹೇರಿದೆ. ಹೀಗಾಗಿ ಬಹುತೇಕ ಬೋಟ್ಗಳು ಈ ಬಾರಿ ಅವಧಿಗೂ ಮೊದಲೇ ಬಂದರಿನಲ್ಲಿ ಲಂಗರು ಹಾಕಿವೆ.
Kshetra Samachara
17/05/2022 08:13 pm