ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಅಪಾರ್ಟ್‌ಮೆಂಟ್‌ನಿಂದ ಕೆಳಕ್ಕೆ ಬಿದ್ದು ಬಾಲಕ ಸಾವು!

ಮಲ್ಪೆ: ಅಪಾರ್ಟ್ ಮೆಂಟ್ ಮೇಲಿಂದ ಕೆಳಕ್ಕೆ ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ಮಲ್ಪೆ ಠಾಣೆ ವ್ಯಾಪ್ತಿಯ

ಕನ್ನರ್ಪಾಡಿಯಲ್ಲಿ ಸಂಭವಿಸಿದೆ. ಆಂದ್ರ ಪ್ರದೇಶ ಮೂಲದ ಪ್ರಸ್ತುತ ಉದ್ಯಾವರದಲ್ಲಿ ನೆಲೆಸಿರುವ ರೀನಾ ಮಂಡೆಲ್ ಎಂಬವರ ಮಗ ಅಶಿಕ್ (13) ಮೃತಪಟ್ಟ ಬಾಲಕ.

ಆಂದ್ರ ಮೂಲದ ಕುಟುಂಬ ಇಲ್ಲಿ ವಾಸವಿದ್ದು ಕಟ್ಟಡಗಳಲ್ಲಿ ಜೇನು ತೆಗೆಯುವ ಕೆಲಸ ಮಾಡುತ್ತಿದೆ. ಕನ್ನರ್ಪಾಡಿ ಜಯದುರ್ಗಾ ದೇವಸ್ಥಾನದ ಎದುರು ಇರುವ ಅಪಾರ್ಟ್ ಮೆಂಟ್ ನಲ್ಲಿ ಇದ್ದ ಜೇನನ್ನು ಆಂದ್ರ ಮೂಲದ ರೀನಾ ಮಂಡಲ್ ತೆಗೆಯುತ್ತಿದ್ದರು.ಮಹಡಿ ಮೇಲಿಂದ ಜೇನು ತೆಗೆಯುತ್ತಿರುವುದನ್ನು ನೋಡುತ್ತಿದ್ದ ಆಶಿಕ್ ಆಯತಪ್ಪಿ ಆಕಸ್ಮಿಕವಾಗಿ ಅಪಾರ್ಟ್ ಮೆಂಟ್ ನ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂಬುದಾಗಿ ರೀನಾ ಮಂಡೆಲ್ ಅವರು ನೀಡಿದ ಮಾಹಿತಿಯಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

23/09/2022 11:04 am

Cinque Terre

17.22 K

Cinque Terre

3