ಸುಳ್ಯ: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ನೀಲಗಿರಿ ಬಸ್ ನಿಲ್ದಾಣ ಬಳಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧನಿಗೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದು ವೃದ್ಧನ ಎರಡೂ ಕಾಲು ಮುರಿದು ಗಂಭೀರ ಗಾಯಗೊಂಡ ಘಟನೆ ನಿನ್ನೆ (ಗುರುವಾರ) ನಡೆದಿದೆ.
ಕಾಲು ಮುರಿದುಕೊಂಡ ವೃದ್ಧನ್ನು ಮುದರ ಎಂದು ಗುರುತಿಸಲಾಗಿದೆ. ಇವರು ಹಾಗೂ ಪ್ರಭಾಕರ ಎಂಬವರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಂಡೆಕೋಲಿನಿಂದ ಸುಳ್ಯ ಕಡೆಗೆ ವೇಗವಾಗಿ ಬೈಕ್‌ನಲ್ಲಿ ಬಂದ ಕೌಶಿಕ್ ಎಂಬ ವಿದ್ಯಾರ್ಥಿ ಹೋಗುತ್ತಿದ್ದ ನಿಯಂತ್ರಣ ತಪ್ಪಿ ಮುದರ ಹಾಗೂ ಪ್ರಭಾಕರ ಇಬ್ಬರಿಗೂ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಪ್ರಭಾಕರ ಅವರಿಗೆ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾದರೆ ಮುದರ ಎಂಬುವರ ಕಾಲು ಸ್ವಾದಿನ ಕಳೆದುಕೊಂಡು ಗಂಭೀರ ಗಾಯಗೊಂಡಿದ್ದಾರೆ.
Kshetra Samachara
16/09/2022 10:23 am