ಉಳ್ಳಾಲ: ಸರಕು ಹೊತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಾರ್ಕೆಟ್ ಗೆ ಕೆಲಸಕ್ಕೆ ತೆರಳುತ್ತಿದ್ದ ಪಾದಚಾರಿಯೋರ್ವ ಮೃತ ಪಟ್ಟ ಘಟನೆ ರಾ.ಹೆ.66 ರ ಕಲ್ಲಾಪು ಎಂಬಲ್ಲಿ ಇಂದು ಮುಂಜಾನೆ ನಡೆದಿದೆ.
ಮೃತರನ್ನು ಬೆಂಗರೆ ನಿವಾಸಿ ನಿಯಾಝ್ ಬಾವ ( 48)ಎಂದು ಗುರುತಿಸಲಾಗಿದೆ. ಕಲ್ಲಾಪುವಿನ ಗ್ಲೋಬಲ್ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಅವರು,ಇಂದು ಬೆಳಗ್ಗಿನ ಜಾವ 4.10ರ ಕಲ್ಲಾಪುವಿನಲ್ಲಿರುವ ಮನೆಯಿಂದ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸರಕು ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಲಾರಿಯ ಎಕ್ಸಿಲ್ ಮುರಿದು ಅಥವಾ ಟೈರ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಮೂಲತ: ಮಂಗಳೂರು ಬೆಂಗರೆ ನಿವಾಸಿಯಾಗಿದ್ದ ನಿಯಾಝ್ ಅವರು ಕಲ್ಲಾಪುವಿನ ಸರ್ವಿಸ್ ಸ್ಟೇಷನ್ ಹಿಂದಿನ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ನೆಲೆಸಿದ್ದರು.ಘಟನೆ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
03/09/2022 12:55 pm