ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಮೀನುಗಾರಿಕೆ ನಡೆಸುತ್ತಿದ್ದಾಗ ನೀರಿಗೆ ಬಿದ್ದು ಸಾವು

ಬೈಂದೂರು: ಮೀನುಗಾರಿಕೆ ನಡೆಸುತ್ತಿದ್ದಾಗ ದೋಣಿಯಿಂದ ಅಕಸ್ಮಾತ್ತಾಗಿ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಸೆ.1ರಂದು ಸಂಜೆ ವೇಳೆ ನಡೆದಿದೆ. ಕಿರಿಮಂಜೇಶ್ವರ ಗ್ರಾಮದ ಮೋಟಿಮನೆಯ ಸತೀಶ್ ಖಾರ್ವಿ (44) ಎಂದು ಮೃತ ಮೀನುಗಾರ.

ಇವರು ಮೀನುಗಾರಿಕೆಗಾಗಿ ತಮ್ಮ ಅಣ್ಣನ ಜೊತೆ ಕೊಡೇರಿ ಬಂದರಿನಿಂದ ದೋಣಿಯಲ್ಲಿ ಬಲೆಯೊಂದಿಗೆ ಸಮುದ್ರಕ್ಕೆ ಹೋಗಿದ್ದು, ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವ ವೇಳೆ ದೊಡ್ಡದಾದ ಅಲೆ ದೋಣಿಗೆ ಅಪ್ಪಳಿಸಿದೆ.ಇದರ ಪರಿಣಾಮ ದೋಣಿಯಲ್ಲಿದ್ದ ಸತೀಶ್ ಖಾರ್ವಿ ಆಯತಪ್ಪಿ ಸಮುದ್ರದ ನೀರಿಗೆ ಬಿದ್ದಿದ್ದರೆಂದು ತಿಳಿದುಬಂದಿದೆ. ಕೂಡಲೇ ಅವರನ್ನು ಮೇಲಕ್ಕೆ ಎತ್ತಿ ತೀರಕ್ಕೆ ಕರೆತರಲಾಯಿತು. ಅಲ್ಲಿಂದ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸತೀಶ್ ಖಾರ್ವಿ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

02/09/2022 09:41 pm

Cinque Terre

9.39 K

Cinque Terre

0