ಉದ್ಯಾವರ: ಟ್ಯಾಂಕರೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಮೃತಪಟ್ಟ ಘಟನೆ ಉದ್ಯಾವರ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ರಾತ್ರಿ ವೇಳೆ ನಡೆದಿದೆ.
ಮೃತರನ್ನು ಮಲ್ಲಾರು ಗ್ರಾಮದ ಕೊಪ್ಪಲಂಗಡಿ ಕೋಟೆ ರಸ್ತೆಯ ನಿವಾಸಿ ಜಾಫರ್ ಎಂಬವರ ಮಗ ಅಲ್ಪಾಝ್(21) ಎಂದು ಗುರುತಿಸಲಾಗಿದೆ. ಸಹಸವಾರ ಸಾಹಿಲ್ ಸಣ್ಣಪುಟ್ಟ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಇವರಿಬ್ಬರು ಸ್ಕೂಟರ್‌ನಲ್ಲಿ ಕಾಪು ಕಡೆಯಿಂದ ಉಡುಪಿ ಕಡೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಟ್ಯಾಂಕರ್ ಢಿಕ್ಕಿ ಹೊಡೆದಿದ್ದು. ಇದರಿಂದ ಇವರಿಬ್ಬರು ಬೈಕ್ ಸಮೇತ ಸವಾರರು ರಸ್ತೆಗೆ ಬಿದ್ದರೆನ್ನಲಾಗಿದೆ.
ಈ ವೇಳೆ ಅಲ್ಪಾಝ್ ತಲೆಯ ಮೇಲೆ ಟ್ಯಾಂಕರ್‌ನ ಚಕ್ರ ಚಲಿಸಿ ಸ್ಥಳದಲ್ಲೇ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ. ಹಿಂಬದಿ ಸವಾರ ಸಣ್ಣಪುಟ್ಟ ಗಾಯಗೊಂಡಿರುದಾಗಿ ತಿಳಿದು ಬಂದಿದೆ. ಅಪಘಾತ ನಡೆಸಿದ ಟ್ಯಾಂಕರ್‌ನ ಚಾಲಕ, ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/08/2022 05:08 pm