ಮಣಿಪಾಲ: ವ್ಯಕ್ತಿಯೊಬ್ಬರು ಮನೆ ಅಂಗಳದಲ್ಲಿ ಅಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟ ಘಟನೆ ಮಣಿಪಾಲ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.
ಮೃತರನ್ನು ಕೆ.ಎಸ್.ರಮೇಶ್(62) ಎಂದು ಗುರುತಿಸಲಾಗಿದೆ. ಇವರು ಮನೆಯ ಎದುರುಗಡೆ ಇರುವ ತೆಂಗಿನ ಮರದಿಂದ ಬಿದ್ದಿದ್ದ ತೆಂಗಿನ ಕಾಯಿ ಹೆಕ್ಕಲು ಮನೆಯ ಅಂಗಳದಲ್ಲಿ ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದರು.ಇದರಿಂದ ಗಂಭೀರವಾಗಿ ತಲೆಗೆ ಗಾಯಗೊಂಡ ಇವರು, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
02/07/2022 11:18 am