ಕೈಕಂಬ: ಮಂಗಳೂರು- ಮೂಡುಬಿದಿರೆ ರಾಜ್ಯ ಹೆದ್ದಾರಿಯ ಕೈಕಂಬ ಕೊಯ್ಲ ಹೋಟೆಲ್ ಬಳಿ ನಡೆದ ಅಪಘಾತದಲ್ಲಿ ಮುಲ್ಕಿ ಕೆರೆಕಾಡಿನ ಯುವಕ ಪ್ರವೀಣ್ (36) ದಾರುಣವಾಗಿ ಸಾವನ್ನಪ್ಪಿದ್ದಾರೆ.
ಪ್ರವೀಣ್ ಮೂಡುಬಿದಿರೆಯಿಂದ ಕೈಕಂಬಕ್ಕೆ ಬೈಕ್ ನಲ್ಲಿ ಬರುತ್ತಿರುವಾಗ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಪ್ರವೀಣ್ ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಬಜಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಪ್ರವೀಣ್ ಮೂಲತಃ ಕೆರೆಕಾಡಿನ ನಿವಾಸಿಯಾಗಿದ್ದು, ಮೂಡುಬಿದಿರೆಯಲ್ಲಿ ನೆಲೆಸಿದ್ದರು.
ಮೇಸ್ತ್ರಿ ಕೆಲಸ ಮಾಡುತ್ತಿದ್ದ ಅವರು, ಕೆಲವು ವರ್ಷಗಳಿಂದ ಮೂಡುಬಿದಿರೆಯ ಕುದುರೆ ತಂಡದಲ್ಲಿ ವೇಷ ಹಾಕುವ ವೃತ್ತಿ, ಹಾಗೂ ನವರಾತ್ರಿ, ಮೊಸರು ಕುಡಿಕೆ ಸಂದರ್ಭ ಹುಲಿ ವೇಷ ಹಾಕುತ್ತಿದ್ದರು.
ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ.
ಅಪಘಾತದ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
Kshetra Samachara
12/06/2022 09:39 pm