ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

ಉಡುಪಿ : ರಾಣೇಬೆನ್ನೂರು ತಾಲೂಕು ಮೆಥೇರಿ ಗ್ರಾಮದ ನಿವಾಸಿ ಶಶಿಕಲಾ ದಿಳ್ಳೆಪ್ಪಬುಡ್ಡಳ್ಳರ(32) ಎಂಬವರು ತನ್ನ ಮಕ್ಕಳಾದ ಹರೀಶ ದಿಳ್ಳೆಪ್ಪ ಬುಡ್ಡಳ್ಳರ(9) ಹಾಗೂ ಯಶವಂತ ದಿಳ್ಳೆಪ್ಪ ಬುಡ್ಡಳ್ಳರ(4) ಎಂಬವರೊಂದಿಗೆ 2021 ,ಅ. 23 ರಂದು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದು, ಈ ಬಗ್ಗೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾಣೆಯಾದ ಶಶಿಕಲಾ ಐದು ಅಡಿ ಎತ್ತರ, ಗೋಧಿಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದು, ಕನ್ನಡ ಮಾತನಾಡುತ್ತಾಳೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಹಾವೇರಿ ಕಂಟ್ರೋಲ್ ರೂಂ. ೦೮೩೭೫-೨೩೭೩೬೮, ಆರಕ್ಷಕರ ಅಧೀಕ್ಷಕರ ದೂ:೦೮೩೭೫-೨೩೨೮೦೦, ರಾಣೇ ಬೆನ್ನೂರು ಉಪವಿಭಾಗ ಡಿಎಸ್.ಪಿ. ದೂ: ೦೮೩೭೩-೨೬೬೩೪೪, ಮೊ ೯೪೮೦೮೦೪೫೨೧, ರಾಣೇಬೆನ್ನೂರು ಗ್ರಾಮೀಣ ಠಾಣೆ ದೂ.೦೮೩೭೩-೨೬೬೪೩೩, ಮೊ- ೯೪೯೮೦೮೦೪೫೫೨ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

04/06/2022 12:19 pm

Cinque Terre

8.69 K

Cinque Terre

0