ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಆಯತಪ್ಪಿ ಇಂದ್ರಾಣಿ ನದಿಗೆ ಬಿದ್ದಾತನ ರಕ್ಷಣೆ- ಅಪಾಯದಿಂದ ಪಾರು!

ಉಡುಪಿ: ಶ್ರೀಕೃಷ್ಣಮಠಕ್ಕೆ ಬಂದಿದ್ದ ಯಾತ್ರಿಕನೋರ್ವ ಆಯತಪ್ಪಿ ಕಲ್ಸಂಕದ ಇಂದ್ರಾಣಿ ನದಿಗೆ ಬಿದ್ದ ಘಟನೆ ಸಂಭವಿಸಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು, ಕಲ್ಸಂಕ ಸರ್ಕಲ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸರ ಸಹಕಾರದಿಂದ ಯಾತ್ರಿಕನನ್ನು ರಕ್ಷಣೆ ಮಾಡಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

ಕಲ್ಸಂಕದಿಂದ ಶ್ರೀಕೃಷ್ಣಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳದತ್ತ ಸಂಪರ್ಕಿಸುವ ರಸ್ತೆ ಸಮೀಪ ಇಂದ್ರಾಣಿ ನದಿ ಹರಿಯುತ್ತದೆ. ತಡೆಗೊಡೆ ಇಲ್ಲದೆ ಅಪಾಯ ಆಹ್ವಾನಿಸುತ್ತಿದೆ. ಈ ಹಿಂದೆ ಇಲ್ಲಿ ಹಲವು ಪಾದಚಾರಿಗಳು, ವಾಹನಗಳು ಉರುಳಿ ಬಿದ್ದಿರುವ ಘಟನೆಗಳು ನಡೆದಿವೆ. ಈ ಹಿಂದೆ ನಾಗರಿಕ ಸಮಿತಿಯು ತಡೆಬೇಲಿ ನಿರ್ಮಿಸುವಂತೆ ಆಡಳಿತ ವ್ಯವಸ್ಥೆಗಳಲ್ಲಿ ಆಗ್ರಹಪಡಿಸಿತ್ತು. ಆದರೆ ಸ್ಪಂದನೆ ದೊರೆಯಲಿಲ್ಲ. ಮುಂದಾದರೂ ನಗರಸಭೆ ನದಿಯ ದಂಡೆಗೆ ತಡೆ ಬೇಲಿ ನಿರ್ಮಿಸುವಂತೆ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

02/05/2022 04:07 pm

Cinque Terre

9.57 K

Cinque Terre

0