ಮುಲ್ಕಿ:ರಾಷ್ತ್ರೀಯ ಹೆದ್ದಾರಿ66ರ ಮುಲ್ಕಿ ಕೊಕ್ಕರ್ ಕಲ್ ಪೆಟ್ರೋಲ್ ಪಂಪ್ ಎದುರುಗಡೆ ದನವನ್ನು ತಪ್ಪಿಸಲು ಹೋಗಿ ಕಾರೊಂದು ಅಪಘಾತವಾದ ಘಟನೆ ಬುಧವಾರ ನಡೆದಿದೆ.
ಮುಲ್ಕಿ ರಾಷ್ಟ್ರೀಯ ಹೆದ್ದಾರಿಯ ಕೊಕ್ಕರ್ ಕಲ್ ಬಳಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರೊಂದು ಎದುರಿನಿಂದ ಅಡ್ಡ ಬಂದ ದನವನ್ನು ತಪ್ಪಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮ್ಯೆಲು ಗಲ್ಲಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಕಾರು ರಸ್ತೆಯ ಎಡ ಬದಿಗೆ ಚಲಿಸಿ ಉಡುಪಿ ಕಡೆಗೆ ತಿರುಗಿ ನಿಂತಿದೆ.ಅಪಘಾತದಿಂದ ಕಾರಿನ ಎದುರು ಭಾಗ ಸಂಪೂರ್ಣ ಜಖಂ ಗೊಂಡಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ. ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ನಡೆದ ಸ್ಥಳದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ಸ್ಥಳೀಯ ವ್ಯಕ್ತಿ ಬಾಲಚಂದ್ರ ಎನ್ನುವವರು ಅಪಾಯಕಾರಿ ರೀತಿಯಲ್ಲಿ ಹುಲ್ಲು ಮೇಯಲು ಧನವನ್ನು ಕಟ್ಟುತ್ತಿದ್ದು ಹೆದ್ದಾರಿಯಲ್ಲಿ ಸಾಗುವ ದ್ವಿಚಕ್ರ ವಾಹನ ಸಹಿತ ಅನೇಕ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿ ಅನೇಕ ಅಪಘಾತಗಳು ಸಂಭವಿಸಿದೆ. ಈ ಬಗ್ಗೆ ಅನೇಕ ಬಾರಿ ವ್ಯಕ್ತಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
20/04/2022 10:23 pm