ಮಣಿಪಾಲ : ಉಡುಪಿಯ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಶನಿವಾರ ತಡ ರಾತ್ರಿ ಸರಣಿ ಅಪಘಾತ ನಡೆದಿದ್ದು ಹಲವು ವಾಹನಗಳಿಗೆ ಹಾನಿಯಾದ ಘಟನೆ ಸಂಭವಿಸಿದೆ. ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯಲ್ಲಿ ಮೊದಲು ಒಂದು ಕಾರು ಮನೆಯ ಕಂಪೌಡ್ ವೊಂದಕ್ಕೆ ಢಿಕ್ಕಿ ಹೊಡೆದಿದೆ.ನಂತರ ಎರಡು ಕಾರು ಹಾಗೂ ಒಂದು ಬೈಕ್ ನಡುವೆ ಅಪಘಾತ ನಡೆದಿದೆ ಎನ್ನಲಾಗಿದೆ.
ವಾರಾಂತ್ಯ ಆಗಿರುವುದರಿಂದ ಕುಡಿತದ ಮತ್ತಿನಲ್ಲಿ ಯುವಕರು ಕಾರು ಚಲಾಯಿಸಿ ಈ ಸರಣಿ ಅಪಘಾತಕ್ಕೆ ಕಾರಣರಾಗಿದ್ದಾರೆ ಎನ್ನಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಅಪಘಾತದಲ್ಲಿ ಕಾರು ಮತ್ತು ಬೈಕ್ ನಲ್ಲಿದ್ದವರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಘಟನೆ ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
10/04/2022 01:52 pm