ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಅಂಗರಗುಡ್ಡೆ ಜಂಕ್ಷನ್ ಬಳಿ ಸ್ಕೂಟರ್ ಗಳ ನಡುವೆ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳು ಮಹಿಳೆಯನ್ನು ಮುಲ್ಕಿ ಕೆಂಪುಗುಡ್ಡೆ ಮಾನಂಪಾಡಿ ನಿವಾಸಿ ಸ್ಪೂರ್ತಿ ಆಚಾರ್ಯ (29) ಎಂದು ಗುರುತಿಸಲಾಗಿದೆ.
ಕಿನ್ನಿಗೋಳಿಯಿಂದ ಅಂಗರಗುಡ್ಡೆ ಗೆ ಹೋಗುತ್ತಿದ್ದ ಸ್ಕೂಟರ್ ಸವಾರ ಅಬ್ದುಲ್ ರಹಿಮಾನ್ ರಾಜ್ಯ ಹೆದ್ದಾರಿ ಅಂಗರಗುಡ್ಡೆ ಜಂಕ್ಷನ್ ಬಳಿ ಏಕಾಏಕಿ ಅಂಗರಗುಡ್ಡೆ ಒಳ ಪೇಟೆಗೆ ತಿರುಗಿಸಿದ್ದು ಹಿಂದಿನಿಂದ ಮತ್ತೊಂದು ಸ್ಕೂಟರ್ ನಲ್ಲಿ ಬರುತ್ತಿದೆ ಸ್ಪೂರ್ತಿ ಆಚಾರ್ಯ ಗಲಿಬಿಲಿಗೊಂಡು ಸ್ಕೂಟರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಮಹಿಳೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಸ್ಥಳಕ್ಕೆ ಸುರತ್ಕಲ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Kshetra Samachara
05/04/2022 10:19 pm