ಕಾಪು : ಮಲ್ಲಾರು ಪಕೀರಣಕಟ್ಟೆಯ ಗುಜರಿ ಅಂಗಡಿಯಲ್ಲಿ ಸೋಮವಾರ ಸಂಭವಿಸಿದ ಸಿಲಿಂಡರ್ ಸ್ಪೋಟ ಮತ್ತು ಬೆಂಕಿ ದುರಂತದಲ್ಲಿ ಮೃತರ ಸಂಖ್ಯೆ ನಾಲ್ಕಕ್ಕೇರಿದೆ.
ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುಜರಿ ಅಂಗಡಿಯ ಕಾರ್ಮಿಕರಾದ ನಯಾಜ್ ಮತ್ತು ಈರಪ್ಪ ಎಂಬುವರು ಗುರುವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಘಟನೆಯಲ್ಲಿ ಗುಜರಿ ಅಂಗಡಿಯ ಪಾಲುದಾರ ರಜಬ್ ಬ್ಯಾರಿ ಚಂದ್ರನಗರ, ಮ್ಯಾನೇಜರ್ ರಜಬ್ ಅಲಿ ಮಲ್ಲಾರು ಸ್ಥಳದಲ್ಲೇ ಮೃತಪಟ್ಟಿದ್ದು, ನಯಾಜ್, ಈರಪ್ಪ ಸಹಿತ ಐದು ಮಂದಿ ಗಾಯಗೊಂಡು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದರು.
ಗಾಯಾಳುಗಳ ಪೈಕಿ ಹಸನಬ್ಬ, ವೀರೇಶ್ ಮತ್ತು ಫಹೀಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
PublicNext
24/03/2022 11:41 am