ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಪಘಾತ ಸಂಭವಿಸಿ 3 ದಿನ ಕಳೆದ್ರೂ ಹೈವೇಯಿಂದ ವಾಹನ ತೆರವುಗೊಳಿಸಿಲ್ಲ!

ಉದ್ಯಾವರ: ರಾಷ್ಟ್ರೀಯ ಹೆದ್ದಾರಿ 66 ಉದ್ಯಾವರ ಸೇತುವೆ ಬಳಿ ಟ್ಯಾಂಕರ್ ಮತ್ತು ಕಂಟೇನರ್ ಅಪಘಾತ ಸಂಭವಿಸಿ ಮೂರು ದಿನಗಳು ಕಳೆದಿವೆ. ಆದರೆ ಟ್ಯಾಂಕರ್ ಮತ್ತು ಕಂಟೇನರ್ ಅನ್ನು ಇನ್ನೂ ಹೆದ್ದಾರಿಯಿಂದ ತೆರವುಗೊಳಿಸಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಓಡಾಟ ಮಾಡುತ್ತವೆ. ಅಷ್ಟೇ ಅಲ್ಲದೆ ಉದ್ಯಾವರ ಸೇತುವೆ ಬಳಿ ಸಾಕಷ್ಟು ಅಪಘಾತಗಳೂ ನಡೆಯುತ್ತಿರುತ್ತವೆ. ಅಪಘಾತ ವಲಯವಾಗಿದ್ದರೂ ಇಲ್ಲಿ ಅಪಘಾತಕ್ಕೊಳಗಾದ ವಾಹನಗಳನ್ನು ತೆರವು ಮಾಡದೇ ಇರುವುದೇ ಆಶ್ಚರ್ಯ.

ಉದ್ಯಾವರ ಸೇತುವೆಯಲ್ಲಿ ದಾರಿದೀಪ ವ್ಯವಸ್ಥೆಯೂ ಸರಿಯಾಗಿಲ್ಲ. ರಾತ್ರಿ ವೇಳೆ ರಸ್ತೆ ಬದಿ ಇರುವ ವಾಹನ ಕಾಣದೆ ಅಪಘಾತ ಸಂಭವಿಸುವ ಸಾಧ್ಯತೆಗಳೂ ಇವೆ. ಆದ್ದರಿಂದ ರಸ್ತೆ ಬದಿ ವಾಹನವನ್ನು ಶೀಘ್ರ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

18/03/2022 08:05 am

Cinque Terre

14.38 K

Cinque Terre

1

ಸಂಬಂಧಿತ ಸುದ್ದಿ