ಬಸ್ರೂರು: ಸೀರೆಗೆ ಬೆಂಕಿ ತಗುಲಿ ವೃದ್ಧೆಯೊಬ್ವರು ಸಾವನ್ನಪ್ಪಿಸ ಘಟನೆ ಇಲ್ಲಿನ ಹಟ್ಟಿಕುದ್ರುವಿನಲ್ಲಿ ಸಂಭವಿಸಿದೆ.
ಹಟ್ಟಿಕುದ್ರು ನಿವಾಸಿ ಬುಡ್ಡು ಮೊಗವೀರ್ತಿ (78) ಸಾವನ್ನಪ್ಪಿದವರು.ಇವರು ಚಳಿಕಾಯಿಸಲೆಂದು ಹಾಕಿದ ಬೆಂಕಿಯು ಆಕಸ್ಮಿಕವಾಗಿ ಸೀರೆಗೆ ತಗಲಿ ತೀವ್ರ ರೀತಿಯ ಸುಟ್ಟ ಗಾಯಕ್ಕೊಳಗಾಗಿದ್ದರು.ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಬೆಳಗ್ಗೆ 9 ಗಂಟೆ ಸುಮಾರಿಗೆ ಅಡುಗೆ ಮನೆ ಬಳಿ ಬೆಂಕಿ ಮುಂದೆ ಚಳಿ ಕಾಯಿಸುತ್ತಿದ್ದಾಗ ಸೀರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ದೇಹಕ್ಕೂ ಅದು ವ್ಯಾಪಿಸಿದೆ.ಇದರಿಂದ ದೇಹದ ಬಹುಭಾಗ ಸುಟ್ಟು ಹೋಗಿತ್ತು. ತತ್‌ಕ್ಷಣ ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Kshetra Samachara
22/01/2022 05:09 pm