ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲ್ಯಾಡಿ: ಬಂಡೆ ಮೇಲೆ ಸೆಲ್ಫಿ ಕ್ರೇಜ್; ಗುಂಡ್ಯ ಹೊಳೆಗೆ ಬಿದ್ದು ಯುವಕ ಕಣ್ಮರೆ

ನೆಲ್ಯಾಡಿ: ವಾಹನ ನಿಲ್ಲಿಸಿ, ಗುಂಡ್ಯ ಹೊಳೆ ನಡುವಿನ ಬಂಡೆಯಲ್ಲಿ ಸೆಲ್ಫಿ ತೆಗೆಯಲು ಮುಂದಾದ ಯುವಕನೊಬ್ಬ ನೀರಲ್ಲಿ ಮುಳುಗಿ ಕಣ್ಮರೆಯಾದ ಘಟನೆ ಇಂದು ನಡೆದಿದೆ.

ನೀರಲ್ಲಿ ಮುಳುಗಿದ ಯುವಕನನ್ನು ರಾಜಸ್ಥಾನ ಮೂಲದ ಸೀತಾರಾಮ್ ಎಂದು ಗುರುತಿಸಲಾಗಿದೆ. ಇಬ್ಬರು ಯುವಕರು ತಮ್ಮ ಆಟೋಮೊಬೈಲ್ ಸ್ಪೇರ್‌ಪಾರ್ಟ್ಸ್ ಪಾರ್ಸೆಲ್ ಸಾಗಾಟದ ಟೆಂಪೋವನ್ನು ರಾಷ್ಟ್ರೀಯ ಹೆದ್ದಾರಿ 75ರ ಬದಿ ನಿಲ್ಲಿಸಿ ಗುಂಡ್ಯ ಹೊಳೆಯ ಬಂಡೆ ಮೇಲೆ ಸೆಲ್ಫಿ ತೆಗೆಯಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ.

ಸ್ಥಳೀಯರು ಹೊಳೆಯಲ್ಲಿ ಹುಡುಕಾಟ ನಡೆಸಿದರೂ ಯುವಕನ ಪತ್ತೆಯಾಗಿಲ್ಲ. ಈ ಪ್ರದೇಶದಲ್ಲಿ ಕಗ್ಗತ್ತಲು ಆವರಿಸಿರುವ ಹಿನ್ನೆಲೆಯಲ್ಲಿ ಮತ್ತು ಈ ಸ್ಥಳ ಅತಿ ಅಪಾಯಕಾರಿಯಾಗಿರುವ ಕಾರಣದಿಂದಾಗಿ ಹುಡುಕಾಟ ಸದ್ಯಕ್ಕೆ ನಿಲ್ಲಿಸಲಾಗಿದ್ದು, ನಾಳೆ ಬೆಳಗ್ಗೆ ಮುಳುಗು ತಜ್ಞರು ಹಾಗೂ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಯಲಿದೆ. ಸ್ಥಳಕ್ಕೆ ಉಪ್ಪಿನಂಗಡಿ ಠಾಣಾಧಿಕಾರಿ ಕುಮಾರ್ ಕಾಂಬ್ಲೆ ನೇತೃತ್ವದ ಪೊಲೀಸರ ತಂಡ ಆಗಮಿಸಿ ಪರಿಶೀಲನೆ ನಡೆಸಿದರು.

Edited By : Nagesh Gaonkar
Kshetra Samachara

Kshetra Samachara

10/11/2021 10:43 pm

Cinque Terre

18.08 K

Cinque Terre

2