ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಬ್ರಹ್ಮಣ್ಯ: ಚಾಲಕನ ಸಮಯ ಪ್ರಜ್ಞೆ; ತಪ್ಪಿದ ರೈಲು ಅವಘಡ

ಸುಬ್ರಹ್ಮಣ್ಯ: ರೈಲು ಹಳಿಯಲ್ಲಿ ಬಿರುಕು ಬಿಟ್ಟ ಘಟನೆ ನಡೆದಿದ್ದು ರೈಲು ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅವಘಡ ತಪ್ಪಿದ ಘಟನೆ ಸುಬ್ರಹ್ಮಣ್ಯ-ಮಂಗಳೂರು ರೈಲ್ವೇ ರಸ್ತೆಯ ಸುಬ್ರಹ್ಮಣ್ಯ ಸಮೀಪ ಸೋಮವಾರ ಸಂಭವಿಸಿದೆ.

ಮುಂಜಾನೆ ಸಂಚರಿಸುವ ಬೆಂಗಳೂರು- ಕಾರವಾರ ರೈಲು ನೆಟ್ಟಣ ದಿಂದ ಮುಂದಕ್ಕೆ ಎಡಮಂಗಲ ಸಮೀಪ ತಲುಪಿದ ವೇಳೆಯಲ್ಲಿ, ರೈಲ್ವೆ ಹಳಿಯಲ್ಲಿ ಬಿರುಕು ಬಿಟ್ಟಿದೆ. ರೈಲಿನ ಒಂದು ಬೋಗಿ ಚಲಿಸಿದ ವೇಳೆ ಸಮಸ್ಯೆಯು ಚಾಲಕನ ಗಮನಕ್ಕೆ ಬಂದಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಚಾಲಕ ರೈಲನ್ನು ನಿಯಂತ್ರಿಸಿ, ನಿಲುಗಡೆ ಮಾಡಿ. ಘಟನೆಯನ್ನು ಇಲಾಖೆ ಗಮನಕ್ಕೆ ತಂದಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿ ಹಳಿ ದುರಸ್ತಿ ನಡೆಸಲಾಯಿತು. ಬಳಿಕ ರೈಲು ಸಂಚರಿಸಲು ಅವಕಾಶ ನೀಡಲಾಯಿತು.

ಬಿರುಕು ಬಿಟ್ಟ ಹಳಿಯಲ್ಲಿ ರೈಲು ಸಂಚರಿಸುತ್ತಿದ್ದಲ್ಲಿ ಬಾರೀ ಅವಘಡ ಸಂಭವಿಸಿ ಪ್ರಾಣ ಹಾನಿ ಉಂಟಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ. ಚಾಲಕನ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Edited By : Nagaraj Tulugeri
Kshetra Samachara

Kshetra Samachara

26/10/2021 03:22 pm

Cinque Terre

19.62 K

Cinque Terre

2