ಸುರತ್ಕಲ್ : ಸುರತ್ಕಲ್ ಸಮೀಪದ ಬೈಕಂಪಾಡಿ ಯಂಗ್ ಸ್ಟಾರ್ ಬಳಿ ಘನ ವಾಹನಗಳಲ್ಲಿ ಯೂರಿಯಾ ತುಂಬಿ ಹೋಗುವ ಸಂದರ್ಭದಲ್ಲಿ, ಎರ್ರಾ. ಬಿರ್ರಿಯಾಗಿ ರಸ್ತೆಗೆ ಬಿದ್ದು ಗೋವಿನ ಕರುಗಳು ಹುಲ್ಲು ತಿನ್ನುವ ವೇಳೆ ನೀರಿನಲ್ಲಿ ಯೂರಿಯಾ ಶೇಖರಣೆಯಾದ ಹುಲ್ಲುಗಳನ್ನು ತಿಂದ ಎರಡು ಗೋವಿನ ಕರುಗಳು ತೀರ ಚಿಂತಾಜನಕ ಪರಿಸ್ಥಿತಿಯಲ್ಲಿ ಕಂಡು ಬಂದು ನಂತರ ಸತ್ತು ಹೋಗಿದೆ,
ಈ ಸಂದರ್ಭ ಇನ್ನೊಂದು ಗೋವಿನ ಸ್ಧಿತಿ ಕೂಡ ಗಂಭೀರವಾಗಿದೆ.
ಈ ಘಟನೆಗೆ ಸಂಬಂಧಪಟ್ಟಂತೆ ಹಿಂದು ಜಾಗರಣ ವೇದಿಕೆ'ಯು ಸುರತ್ಕಲ್ ಘಟಕದ ಸದಸ್ಯರು ಪಶು ವೈದ್ಯರನ್ನು ಸಂಪರ್ಕಿಸಿ ಸ್ಧಳಕ್ಕೆ ತಕ್ಷಣ ಬರುವಂತೆ ಸೂಚಿಸಿದ್ದು ಮೃತ ಗೋವಿನ ಕರುಗಳ ಅಂತಿಮ ಸಂಸ್ಕಾರ ನಡೆಸಿದ್ದಾರೆ
ಕೂಡಲೇ ಸಂಘಟನೆ ಸದಸ್ಯರು ಈ ಬಗ್ಗೆ ಸುರತ್ಕಲ್ ಟ್ರಾಫಿಕ್ ಠಾಣೆಗೆ, ಎನ್.ಎಂ.ಪಿ.ಟಿ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಹಾಗೂ ಅಪಾಯಕಾರಿ ರೀತಿಯಲ್ಲಿ ಚಲಿಸಿ ಯೂರಿಯಾವನ್ನು ರಸ್ತೆ ಮೇಲೆ ಚೆಲ್ಲುವ ಟಿಪ್ಪರ್ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Kshetra Samachara
25/09/2021 07:33 pm